For the best experience, open
https://m.samyuktakarnataka.in
on your mobile browser.

ಮೀನುಗಾರರ ಬಲೆಗೆ ಬಿತ್ತು ಬೃಹತ್ ಬಂಗಡೆ ಮೀನು

05:35 PM Aug 28, 2023 IST | Samyukta Karnataka
ಮೀನುಗಾರರ ಬಲೆಗೆ ಬಿತ್ತು ಬೃಹತ್ ಬಂಗಡೆ ಮೀನು

ಕಾರವಾರ: ೪೮ ಸೆ.ಮೀ ಉದ್ದದ ಬೃಹತ್ ಬಂಗಡೆ ಮೀನೊಂದು ಕಾರವಾರ ಮೀನುಗಾರರ ಬಲೆಗೆ ಸಿಕ್ಕಿದ್ದು, ದೇಶದಲ್ಲಿಯೇ ಈವರೆಗೆ ಸಿಕ್ಕಿರುವ ಬಂಗಡೆ ಮೀನುಗಳ ಪೈಕಿ ಇದು ಅತಿ ದೊಡ್ಡ ಮೀನು ಎಂದೇ ಹೇಳಲಾಗುತ್ತಿದೆ.
ನಗರದ ಬೈತಖೋಲ ಮೀನುಗಾರರ ಬಲೆಗೆ ಬಿದ್ದಿರುವ ಈ ಮೀನು ೪೮ ಸೆಂ.ಮೀ ಉದ್ದ ಹಗೂ ೧೨ ಸೆಂ.ಮೀ ಅಗಲವಿದೆ. ಅಲ್ಲದೇ ಬರೋಬ್ಬರಿ ೧.೨ ಕೆ.ಜಿ ತೂಕವಿದೆ. ಪಶ್ಚಿಮ ಕರಾವಳಿ ಭಾಗದಲ್ಲಿ ಸಿಕ್ಕಿರುವುದರಲ್ಲಿ ಇದು ಅತೀ ಹೆಚ್ಚು ತೂಕದ್ದಾಗಿದೆ.
ಮರೈನ್ ಬಯೋಲಜಿ ವಿದ್ಯಾರ್ಥಿಗಳ ತಂಡ ಬೈತಖೋಲಕ್ಕೆ ಭೇಟಿ ನೀಡಿ ಮೀನನ್ನು ಪರಿಶೀಲಿಸಿದೆ. ಈ ಹಿಂದೆ ೩೬ ಸೆಂ.ಮೀ. ಗಂಡು ಬಂಗಡೆ, ೪೨ ಸೆಂ.ಮೀ. ಹೆಣ್ಣು ಬಂಗಡೆ ಸಿಕ್ಕಿರುವುದು ದಾಖಲೆಯಾಗಿದ್ದು ಈಗ ಸಿಕ್ಕಿರುವುದು ಅವೆರಡಕ್ಕಿಂತ ದೊಡ್ಡದಿದೆ. ಸಾಮಾನ್ಯವಾಗಿ ದೊಡ್ಡ ಬಂಗಡೆ ೨೫ ರಿಂದ ೩೦ ಸೆಂ.ಮೀ ಮಾತ್ರ ಬೆಳೆಯುತ್ತದೆ. ಹೀಗಾಗಿ ಈಗ ಸಿಕ್ಕಿರುವ ಮೀನು ದಾಖಲೆಯಾಗಿದ್ದು ಇದನ್ನು ಅಧ್ಯಯನಕ್ಕಾಗಿ ಸಂರಕ್ಷಿಸಿ ಇಡುವುದಾಗಿ ತಿಳಿಸಿದ್ದಾರೆ.
ಮೀನುಗಾರರೂ ಸಹ ಇಷ್ಟು ದೊಡ್ಡ ಬಂಗಡೆ ಕಂಡು ಖುಷಿಯಾಗಿದ್ದು ಇತರರಿಗೂ ನೋಡಲು ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಮರೈನ್ ಬಯೋಲಜಿ ವಿಭಾಗಕ್ಕೆ ಮೀನನ್ನ ಹಸ್ತಾಂತರಿಸಿದ್ದಾರೆ ಎಂದು ಮರೈನ್ ಬಯೋಲಜಿ ವಿಭಾಗದ ಪ್ರಾಧ್ಯಾಪಕ ಶಿವಕುಮಾರ ಹರಗಿ ಮಾಹಿತಿ ನೀಡಿದ್ದಾರೆ.