ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೀಸಲಾತಿ ಜಾತಿ ಆಧಾರಿತವಾಗಿಲ್ಲದಿರುವಾಗ ಜಾತಿ ಗಣತಿ ಯಾಕೆ

07:23 PM Oct 27, 2024 IST | Samyukta Karnataka

ಮಂಗಳೂರು: ಸನಾತನ ಧರ್ಮ ಒಡೆಯುವ ಪಿತೂರಿ ಜಾತಿಗಣತಿಯಲ್ಲಿದೆ. ಮೀಸಲಾತಿಯಿಂದ ಎಲ್ಲರಿಗೆ ಅನುಕೂಲವಾಗಿಲ್ಲ. ಮೀಸಲಾತಿ ಜಾತಿ ಆಧಾರಿತವಾಗಿಲ್ಲದಿರುವಾಗ ಜಾತಿ ಗಣತಿ ಯಾಕೆ. ಎಲ್ಲ ದರ್ಮದಲ್ಲಿ ಹಿಂದುಳಿದವರಿದ್ದಾರೆ. ಒಗ್ಗಟ್ಟಾಗದಿದ್ದಲ್ಲಿ ಬ್ರಾಹ್ಮಣರಿಗೆ ಸಮಸ್ಯೆಯಾಗಲಿದೆ, ಅಪಾಯ ಕಾದಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದೇಶದ ಹಿತರಕ್ಷಣೆಗಾಗಿ, ಸನಾತನ ಧರ್ಮ ರಕ್ಷಣೆಗಾಗಿ ಇದೆ ಎಂದು ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ, ಹಿರಿಯ ವಕೀಲ, ಗಾಯತ್ರೀ ಸಂಗಮದ ಗೌರವಾಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಎರಡು ದಿನಗಳ ಕಾಲ ನಡೆದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ ಧರ್ಮಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.

ಚಿತ್ರಾಪುರ ಪ್ರೇರಣೆ: ಬೆಂಗಳೂರಿನಲ್ಲಿ ಜನವರಿ ಸುಮಾರಿಗೆ ನಡೆಯಲಿರುವ ಗಾಯತ್ರಿ ಯಜ್ಞದಲ್ಲಿ ೨೪ ಕೋಟಿ ಗಾಯತ್ರಿ ಮಂತ್ರ ಪಠಿಸಲಾಗುವುದು. ರಾಜ್ಯ ಸಮಾವೇಶಕ್ಕೆ ಮಂಗಳೂರು ಚಿತ್ರಾಪುರ, ಗಾಯತ್ರಿ ಸಂಗಮ ವಿಪ್ರ ಸ ಂಗಮಕ್ಕೆಗಾಯತ್ರಿ ಸಂಗಮ ಪ್ರೇರಣೆಯಾಗಲಿದೆ. ಎಲ್ಲ ಜಿಲ್ಲೆಗಳಲ್ಲಿ ಗಾಯತ್ರಿ ಸಂಗಮ ನಡೆಸಬೇಕು ಎಂದರು.

ಒಕ್ಕೊರಲ ಖಂಡನೆ: ರಾಜಕಾರಣಿಯೊಬ್ಬರು ಪೇಜಾವರ ಶ್ರೀಗಳನ್ನು ಅವಮಾನಿಸಿದ್ದಾರೆ ಎಂದು ಸಮಾವೇಶದಲ್ಲಿ ಒಕ್ಕೊರಲಿನಿಂದ ಖಂಡನಾ ನಿರ್ಣಯ ಸ್ವೀಕರಿಸಲಾಯಿತು. ಸಮಾಜದ ಎಲ್ಲ ಸಮಸ್ಯೆಗಳಿಗೆ ಬ್ರಾಹ್ಮಣ ಸಮಾಜ ವನ್ನು ಹೊಣೆಗಾರರನ್ನಾಗಿಸಲಾಗಿಸುತ್ತಿದ್ದು ಇದು ಸರಿಯಲ್ಲ. ಇದರ ವಿರುದ್ಧ ಪ್ರತಿಭಟಿಸಲು ನಿರ್ಧರಿಸಲಾಯಿತು. ಅಶೋಕ ಹಾರನಹಳ್ಳಿಯವರು ನಿರ್ಣಯ ಮಂಡಿಸಿದರು.

Next Article