ಮುನಿ ಮಹಾರಾಜರ ಸಮಾಧಿ ಮರಣ
ಬೈಲಹೊಂಗಲ: ನ. ೧೩ರಂದು ಯಮಸಲ್ಲೇಖನ ವೃತ್ತ ಸ್ವೀಕರಿಸಿದ್ದ ಶ್ರೀ ೧೦೮ ಜ್ಞಾನೇಶ್ವರ ಮುನಿ ಮಹಾರಾಜರು ತಮ್ಮ ೮೬ನೇ ವಯಸ್ಸಿನಲ್ಲಿ ಎಂಟು ದಿನಗಳ ನಂತರ ನ. ೨೦ರಂದು ಸಂಜೆ ೫ ದೇವಲಾಪೂರ ಕ್ಷೇತ್ರದಲ್ಲಿ ಸಮಾಧಿ ಮರಣ ಹೊಂದಿದರು.
ಇವರ ಅಂತಿಮ ದಹನಕ್ರಿಯಾದಿ ವಿಧಿ ವಿಧಾನಗಳು ಇಂದು (ನ. ೨೧) ಮುಂಜಾನೆ ೧೧ ಗಂಟೆಗೆ ದೇವಲಾಪೂರ ಗ್ರಾಮದ ಅಷ್ಟಮ ನಂದೀಶ್ವರ ಕ್ಷೇತ್ರದಲ್ಲಿ ಜರುಗಲಿದೆ. ಅಪಾರ ಭಕ್ತ ಸಮೂಹ ಹೊಂದಿದ್ದ ಮುನಿಗಳು ದೇವಲಾಪೂರ ಗ್ರಾಮದಲ್ಲಿ ಅಷ್ಟಮ ನಂದೀಶ ಕ್ಷೇತ್ರದ ಸಂಸ್ಥಾಪಕರಾಗಿದ್ದರು. ಜ್ಞಾನತೀರ್ಥ ವಿದ್ಯಾಪೀಠ ಶಿಕ್ಷಣ ಸ್ಥಾಪಿಸಿದ್ದಾರೆ. ೩೦೦ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಲೌಖಿಕ ಶಿಕ್ಷಣದೊಂದಿಗೆ ಧಾರ್ಮಿಕ, ಮೌಲ್ಯ ಶಿಕ್ಷಣ ನಡೆದಿದೆ. ಕುಲಭೂಷಣ ಅಲ್ಪಸಂಖ್ಯಾತರ ಕ್ರೆಡಿಟ್ ಸೊಸೈಟಿ ಸ್ಥಾಪಿಸಿ ಗ್ರಾಮೀಣ ಜನರ ಆರ್ಥಿಕತೆಗೆ ಅನುಕೂಲತೆ ಮಾಡಿದ್ದರು. ಧಾರವಾಡ, ಬೆಳಗಾವಿ ಜಿಲ್ಲೆಯ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಿನ ಮಂದಿರಗಳನ್ನು ಕಟ್ಟಿಸಿ ಜನರ ಕಲ್ಯಾಣಕ್ಕೆ ನೆರವಾಗಿದ್ದರು. ಲೋಕ ಕಲ್ಯಾಣಕ್ಕಾಗಿ, ಧರ್ಮ ಜಾಗೃತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.