ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮುಳ್ಳು ಚುಚ್ಚಿದೆ ಅಂತಾ ಭಾವಿಸಿ...

03:01 PM May 27, 2024 IST | Samyukta Karnataka

ಚಿಕ್ಕಮಗಳೂರು: ಹಾವು ಕಚ್ಚಿದ್ದನ್ನ ಮುಳ್ಳು ಚುಚ್ಚಿದೆ ಅಂತಾ ಭಾವಿಸಿ ರಾತ್ರಿ ಮಲಗಿದ್ದ ವ್ಯಕ್ತಿ ಬೆಳಗ್ಗೆ ಸಾವನ್ನಪ್ಪಿರುವ ಅಚ್ಚರಿಯ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.

ಗಣ್ಯ ನಾಯ್ಕ(44) ಮೃತ ದುರ್ದೈವಿ. ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ್ದು, ಕೆಲಸದಲ್ಲಿ ಮಗ್ನವಾಗಿದ್ದ ವ್ಯಕ್ತಿಗೆ ಹಾವು ಕಚ್ಚಿರುವುದೇ ಗಮನಕ್ಕೆ ಬಂದಿಲ್ಲ. ರಾತ್ರಿ ಮನೆಗೆ ಬಂದ ಗಣ್ಯ ನಾಯ್ಕ ಮನೆಯವರಿಗೆ ಮುಳ್ಳು ಚುಚ್ಚಿದೆ ಅಂತಾ ಹೇಳಿ ರಾತ್ರಿ ಊಟ ಮಾಡಿ ಮಲಗಿದ್ದಾರೆ.

ಆದರೆ ಬೆಳಗ್ಗೆ ತುಂಬಾ ಸಮಯವಾದ್ರೂ ಹಾಸಿಗೆಯಿಂದ ಏಳದೇ ಇದ್ದದ್ದನ್ನ ನೋಡಿ, ಮನೆಯವರು ಎಬ್ಬಿಸಿದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ. ಹಾವು ಕಚ್ಚಿದ್ರೂ ಮುಳ್ಳು ಚುಚ್ಚಿದೆ ಅಂತಾ ನಿರ್ಲಕ್ಷಿಸಿದ್ದೇ ಇದೀಗ ಗಣ್ಯ ನಾಯ್ಕ ಜೀವ ಹೋಗಲು ಕಾರಣವಾಗಿದೆ.

ಒಂದು ವೇಳೆ ಆಗಲೇ ಎಚ್ಚೆತ್ತುಕೊಂಡಿದ್ರೆ, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ರೆ ಸಾವು ತಪ್ಪಿಸಬಹುದಿತ್ತೆನೋ.? ಆದರೆ ಹಾವು ಕಚ್ಚಿದ್ರೂ ಗಮನ ನೀಡದೇ ಇದ್ದಿದ್ದು ಇಂದು ಅಮೂಲ್ಯ ಜೀವವನ್ನ ಕಳೆದುಕೊಳ್ಳುವಂತಾಗಿದೆ.

Next Article