ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೂಢನಂಬಿಕೆಗೆ ಪುತ್ರಿಯರ ಕೊಲೆ ಮಾಡಿದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ

06:42 PM Jul 23, 2024 IST | Samyukta Karnataka

ಬೆಳಗಾವಿ: ಮೂಢನಂಬಿಕೆಗೆ ಮರುಳಾಗಿ ತನ್ನ ಇಬ್ಬರು ಪುತ್ರಿಯರನ್ನು ಅಮಾನುಷವಾಗಿ ಕೊಲೆ
ಮಾಡಿದ ಪಾಪಿ ಅಪ್ಪನಿಗೆ ೬ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ, ಬೆಳಗಾವಿ ನ್ಯಾಯಾಲಯ
ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ:
ಬೆಳಗಾವಿಯ ಎ.ಪಿ.ಎಂ.ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಂಗ್ರಾಳಿ ಕೆ.ಎಚ್ ವಾಸಿಯಾದ ಆರೋಪಿ ಅನೀಲ ಚಂದ್ರಕಾಂತ ಬಾಂದೇಕರ ಈತನು ತನ್ನ ಮನೆ ಮಾರಾಟ ಮಾಡಲು ಖರೀದಿಗೆ ಯಾರು ಬರದ ಕಾರಣಕ್ಕೆ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದ. ಅಂದು ರಾತ್ರಿ ಆತನಿಗೆ
ಕನಸಿನಲ್ಲಿ ಯಾವುದೋ ಶಕ್ತಿ ತನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಕೊಂದು ತನ್ನರಕ್ತವನ್ನು ಶಿವಲಿಂಗಕ್ಕೆ ಹಾಕಿದರೆ ತನ್ನ ಮನೆ ಮಾರಾಟ ಆಗುತ್ತದೆ ಹಾಗೂ ಎಲ್ಲ ಕೆಲಸದಲ್ಲಿ ಯಶಸ್ಸು ಆಗುತ್ತದೆ ಎಂದು ಹೇಳಿದಂತಾಗಿದೆ.
ಇದನ್ನು ನಂಬಿ ಮರುಳಾದ ಅನೀಳ ತನ್ನ ಮಕ್ಕಳಾದ ಅಂಜಲಿ(೮) ಹಾಗೂ ಅನನ್ಯ (೪) ಇವರಿಗೆ ಫಿನಾಯಿಲ್ ಕುಡಿಸಿ, ಬಾಯಿ ಒತ್ತಿ ಹಿಡಿದು ಕೊಲೆ ಮಾಡಿ ಬೇಡಿನಿಂದ ತನ್ನ ರಕ್ತವನ್ನು
ಜಗಲಿಯಲ್ಲಿದ್ದ ಶಿವಲಿಂಗಕ್ಕೆ ಚೆಲ್ಲಿದ್ದಾನೆ
ಈ ಕೊಲೆ ಪ್ರಕರಣ ದಾಖಲಿಸಿದ ಎ.ಪಿ.ಎಂ.ಸಿ ಪೊಲೀಸ್ ಠಾಣಾ ಗುನ್ನಾ ನಂಬರ ೬೯/೨೦೨೧, ಕಲಂ: ೩೦೨ ಐಪಿಸಿ ಅಡಿ ಅಂದಿನ ಆರಕ್ಷಕ ನಿರೀಕ್ಷಕರಾದ ಮಂಜುನಾಥ ಹಿರೇಮಠ ಇವರು
ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರೋಪಿತನ ವಿರುದ್ಧ ಮಾಡಲಾಗಿದ್ದ ಆರೋಪ ಕಲಂ ೩೦೨ ಅಡಿಯಲ್ಲಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ
ಆರೋಪಿತನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ.೨೦,೦೦೦ಗಳ ದಂಡ ವಿಧಿಸಿ ಎಚ್. ಎಸ್.
ಮಂಜುನಾಥ, ಮಾನ್ಯ ನ್ಯಾಯಾದೀಶರು, ೬ನೇ ಅಪರ ಜಿಲ್ಲಾ & ಸತ್ರ ನ್ಯಾ. ಬೆಳಗಾವಿರವರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ನಸರೀನ ಬಂಕಾಪೂರ, ಸರ್ಕಾರಿ ಅಭಿಯೋಜಕರು, ೬ನೇ ಅಪರ ಜಿಲ್ಲಾ & ಸತ್ರ
ನ್ಯಾ. ಬೆಳಗಾವಿ ರವರು ವಾದ ಮಂಡಿಸಿದರು.

Next Article