ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಅತಿಶಿ
ನವದೆಹಲಿ: ನೂತನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಸಚಿವೆ ಆತಿಶಿ ಅವರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೂಚಿಸಿದ್ದು ಆ ಪ್ರಸ್ತಾಪಕ್ಕೆ ಎಲ್ಲಾ ನಾಯಕರು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ನೂತನ ಶಾಸಕಾಂಗ ಪಕ್ಷದ ನಾಯಕಿಯಾಗಿ ಸಚಿವೆ ಆತಿಶಿ ಆಯ್ಕೆಯಾಗಿದ್ದಾರೆ. ಅತಿಶಿ ಅವರು ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ. ಇನ್ನು ಈ ಸಂಧರ್ಭದಲ್ಲಿ ಮಾತನಾಡಿರುವ ಅವರು ನನ್ನ ಮೇಲೆ ನಂಬಿಕೆ ಇರಿಸಿ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ನನ್ನ ಮೇಲೆ ಇಷ್ಟೊಂದು ನಂಬಿಕೆ ಇಟ್ಟಿರುವುದಕ್ಕೆ ನನಗೆ ಸಂತೋಷವಾಗಿದೆ, ಆದರೆ ಅದಕ್ಕಿಂತ ಹೆಚ್ಚಾಗಿ ನನ್ನ ಹಿರಿಯ ಸಹೋದರ ಅರವಿಂದ್ ಕೇಜ್ರಿವಾಲ್ ಇಂದು ರಾಜೀನಾಮೆ ನೀಡುತ್ತಿರುವ ಕಾರಣ ನನಗೆ ಬೇಸರವಾಗಿದೆ ಎಂದು ಅವರು ಹೇಳಿದರು. ದೆಹಲಿಯಲ್ಲಿ ಒಬ್ಬರೇ ಸಿಎಂ ಮತ್ತು ಅವರ ಹೆಸರು ಅರವಿಂದ್ ಕೇಜ್ರಿವಾಲ್ ಎಂದು ಎಎಪಿ ಶಾಸಕರು ಮತ್ತು ದೆಹಲಿಯ ಎರಡು ಕೋಟಿ ಜನರ ಪರವಾಗಿ ನಾನು ಇಂದು ಹೇಳಲು ಬಯಸುತ್ತೇನೆ ವಿಧಾನಸಭೆ ಚುನಾವಣೆ ನಡೆಯುವವರೆಗೂ ಈ ಜವಾಬ್ದಾರಿಯನ್ನು ತಾವೇ ನಿಭಾಯಿಸುವುದಾಗಿ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕೇಜ್ರಿವಾಲ್‌ಗೆ ಮತ ನೀಡಿ ಅವರನ್ನು ಗೆಲ್ಲಿಸುವಂತೆ ಅವರು ದೆಹಲಿಯ ಜನತೆ ಮತ್ತು ಶಾಸಕರಿಗೆ ಮನವಿ ಮಾಡಿದರು. ದೆಹಲಿ ಜನರು ಮತ್ತು ಎಎಪಿ ಶಾಸಕರ ಪರವಾಗಿ ನಾನು ಇದನ್ನು ಹೇಳಲು ಬಯಸುತ್ತೇನೆ, ದೆಹಲಿಗೆ ಒಬ್ಬರೇ ಸಿಎಂ ಇದ್ದಾರೆ ಮತ್ತು ಅದು ಅರವಿಂದ್ ಕೇಜ್ರಿವಾಲ್ ಎಂದರು.