ಮೂರು ವರ್ಷದ ನಂತರ ಅಸ್ಥಿಪಂಜರವಾಗಿ ವ್ಯಕ್ತಿ ಪತ್ತೆ !
ಧಾರವಾಡ: ಮೂರು ವರ್ಷಗಳ ಹಿಂದೆ ಮಲಗಿದಲ್ಲೇ ಮಲಗಿದ್ದ ವ್ಯಕ್ತಿ ಸಾವನ್ನಪ್ಪಿ ಇದೀಗ ಅಸ್ಥಿ ಪಂಜರವಾಗಿ ಪತ್ತೆಯಾಗಿರುವ ವಿಚಿತ್ರ ಘಟನೆ ಇಲ್ಲಿನ ಮಾಳಮಡ್ಡಿ ಬಡಾವಣೆಯ ಕೆನರಾ ಬ್ಯಾಂಕ್ ಹತ್ತಿರ ನಡೆದಿದೆ.
ಚಂದ್ರಶೇಖರ್ ಕೊಲ್ಲಾಪುರ ಎಂಬ ವ್ಯಕ್ತಿ ಮೂರು ವರ್ಷಗಳ ಹಿಂದೆ ಕಾಣೆಯಾಗಿದ್ದರಂತೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ಈತನ ಸಂಬಂಧಿಕರು ಕಳೆದ ತಿಂಗಳಷ್ಟೇ ನಗರಕ್ಕೆ ಆಗಮಿಸಿದ್ದರು. ಚಂದ್ರಶೇಖರ್ ಕಾಣೆಯಾಗಿದ್ದು ಅವರನ್ನು ಹುಡುಕಿಕೊಡಿ ಎಂದು ಧಾರವಾಡದ ವಿದ್ಯಾಗಿರಿ ಠಾಣೆಗೆ ದೂರು ಸಲ್ಲಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರು ಇದ್ದ ಮನೆಗೆ ಮಂಗಳವಾರ ಪೊಲೀಸರು ಹೋದಾಗ ಅಚ್ಚರಿ!
ಅಲ್ಲಿ ಚಂದ್ರಶೇಖರ ಇರಲಿಲ್ಲ; ಅವರ ಅಸ್ತಿ ಪಂಜರ ಪತ್ತೆಯಾಗಿ ದಂಗು ಬಡಿಸಿದೆ.
ಆ ಮನೆಯಲ್ಲಿ ಚಂದ್ರಶೇಖರ 2021ರಲ್ಲಿ ಮಲಗಿದ ಜಾಗದಲ್ಲೇ ಮಲಗಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಆಗಿನಿಂದಲೂ ಯಾರೂ ಆ ಕಡೆ ಸುಳಿಯದೇ ಹೋಗಿದ್ದರಿಂದ ಚಂದ್ರಶೇಖರ ಇದೀಗ ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದಿದೆ.
ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾಗಿರಿ ಠಾಣೆ ಪೊಲೀಸರು ತನಿಖೆ ನಡೆಸಲಿದ್ದಾರೆ.