For the best experience, open
https://m.samyuktakarnataka.in
on your mobile browser.

ಮೂರು ವರ್ಷದ ಮಗುವಿನ ಎದುರೆ ದಂಪತಿ ಆತ್ಮಹತ್ಯೆ

07:49 PM Nov 16, 2024 IST | Samyukta Karnataka
ಮೂರು ವರ್ಷದ ಮಗುವಿನ ಎದುರೆ ದಂಪತಿ ಆತ್ಮಹತ್ಯೆ

ಗುತ್ತಲ (ಹಾವೇರಿ): ಮೂರು ವರ್ಷದ ಮುದ್ದು ಕಂದಮ್ಮನ ಎದುರೇ ದಂಪತಿಗಳಿಬ್ಬರು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಬೆಳವಿಗಿ ಗ್ರಾಮದಲ್ಲಿ ಗುರುರಾತ್ರಿ ತಡರಾತ್ರಿ ಸಂಭವಿಸಿದೆ.
ಗ್ರಾಮದ ಅಂಬೇಡ್ಕರ್ ನಗರದ ನಿವಾಸಿಗಳಾದ ಹನುಮಂತ ಹೊನ್ನಪ್ಪ ಹೊನ್ನಪ್ಪವರ (32) ಹಾಗೂ ಸವಿತಾ ಹನುಮಂತ ಹೊನ್ನಪ್ಪನವರ (26) ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು.
ಗುರುವಾರ ತಡರಾತ್ರಿ ಈ ದಂಪತಿಗಳ 3 ವರ್ಷದ ಮಗಳು ಚೇತನಾ ಜೋರಾಗಿ ಅಳುತ್ತಿರುವ ಧ್ವನಿ ಅಕ್ಕಪಕ್ಕದ ಮನೆಯವರಿಗೆ ಕೇಳಿಸಿದೆ. ಇದರಿಂದ ಎಚ್ಚೆತ್ತ ಅಕ್ಕಪಕ್ಕದ ಮನೆಯವರು ಹನುಮಂತ ಹೊನ್ನಪ್ಪನವರ ಮನೆಯ ಬಾಗಿಲನ್ನು ಬಡಿದ್ದಾರೆ. ಆದರೆ ಮಗು ಮಾತ್ರ ಅಳುತ್ತಿದ್ದಾಗ ಅನುಮಾನಗೊಂಡ ಮನೆಯ ಮೇಲ್ಛಾವಣಿಯ ಹಂಚನ್ನು ತೆಗೆದು ನೋಡಿದ್ದಾರೆ. ಆಗ ಹನುಮಂತ ಹಾಗೂ ಸವಿತಾ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ. ತಕ್ಷಣ ಕೆಳಗಡೆ ಇಳಿದು ನೆರೆಹೊರೆಯವರು ಮಗುವನ್ನು ಎತ್ತಿಕೊಂಡು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದರು. ಘಟನೆಯ ಬಗ್ಗೆ ಯಾವುದೇ ಸಂಶಯವಿಲ್ಲ, ತನ್ನ ಅಳಿಯಾ ಹಾಗೂ ಮಗಳ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಮೃತ ಸವಿತಾಳ ತಾಯಿ ಗುತ್ತಲ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.

Tags :