ಮೂವರು ಮಕ್ಕಳ ತಾಯಿ ಪ್ರೇಮಿಯೊಂದಿಗೆ ಪರಾರಿ
10:26 PM Jun 18, 2024 IST
|
Samyukta Karnataka
ಬೆಳಗಾವಿ: ಹೆತ್ತವ್ವಳೊಬ್ಬಳು ತಂದೆಯನ್ನು ಕಳೆದುಕೊಂಡಿದ್ದ ತನ್ನ ಮೂವರು ಮಕ್ಕಳನ್ನು ಅವರ ಅಜ್ಜಿಯ ಜೊತೆ ಬಿಟ್ಟು ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ.
ಇಲ್ಲಿನ ಗಣೇಶಪುರದಲ್ಲಿ ಈ ಘಟನೆ ನಡೆದಿದ್ದು, ೪೦ರ ಹರೆಯದ ಈ ಮಹಿಳೆ ಈಗ ಪ್ರೇಮಿಯೊಂದಿಗೆ ಹೊಸ ಬದುಕು ಶುರು ಮಾಡಿದ್ದಾಳೆ. ೧೯, ೧೫ ಹಾಗೂ ೧೦ ವರ್ಷದ ಮೂವರು ಮಕ್ಕಳು ಅಮ್ಮನನ್ನು ನಮಗೆ ವಾಪಸ್ ಕರೆದು ತಂದು ಕೊಡುವಂತೆ ಕ್ಯಾಂಪ್ ಠಾಣೆಯ ಪೊಲೀಸರಿಗೆ ಮೊರೆ ಹೋಗಿದ್ದಾರೆ ಎಂದು ಗೊತ್ತಾಗಿದೆ. ಈಕೆಯ ಪತಿ ಈ ಹಿಂದೆ ಮೃತಪಟ್ಟಿದ್ದು, ಅನುಕಂಪದ ಆಧಾರದಲ್ಲಿ ಆತನ ಸರ್ಕಾರಿ ಕೆಲಸವನ್ನು ಈಕೆ ಪಡೆದುಕೊಂಡಿದ್ದಳು.
Next Article