For the best experience, open
https://m.samyuktakarnataka.in
on your mobile browser.

ಮೆಟ್ರೋ ಟ್ರ್ಯಾಕ್‌ಗೆ ಬಿದ್ದ ಮಗು: ಮುಂದೇನಾಯ್ತು…..

01:15 PM Aug 02, 2024 IST | Samyukta Karnataka
ಮೆಟ್ರೋ ಟ್ರ್ಯಾಕ್‌ಗೆ ಬಿದ್ದ ಮಗು  ಮುಂದೇನಾಯ್ತು…

ಬೆಂಗಳೂರು: ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಾಲ್ಕು ವರ್ಷದ ಮಗುವೊಂದು ಮೆಟ್ರೋ ಹಳಿ ಮೇಲೆ ಹಾರಿದ ಘಟನೆ ಕಳೆದ ರಾತ್ರಿ ನಡೆದಿದೆ.

ಇನ್ನು ಈ ಕುರಿತಂತೆ ನಮ್ಮ ಮೆಟ್ರೋ ಪ್ರಕಟಣೆ ಹೊರಡಿಸಿದ್ದು ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸುಮಾರು 08 ಗಂಟೆಗೆ ಪ್ಲಾಟ್‌ಫಾರ್ಮ್ 2 ರಲ್ಲಿ ತನ್ನ ಒಡಹುಟ್ಟಿದವರೊಂದಿಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ರೈಲಿಗಾಗಿ ಕಾಯುತ್ತಿದ್ದಾಗ ಓಡಿ ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದಿದ್ದಾನೆ. ಇದನ್ನು ಗಮನಿಸಿ ಕೂಡಲೇ ತುರ್ತು ರೈಲು ನಿಲುಗಡೆ ವ್ಯವಸ್ಥೆಯ ಮೂಲಕ ಸ್ಟೇಷನ್ ಕಂಟ್ರೋಲರ್ ರೈಲು ಸಂಚಾರವನ್ನು ನಿಲ್ಲಿಸಿದರು. ಪ್ಲಾಟ್ನಾರ್ಮ್-1 ಮತ್ತು ಪ್ಲಾಟ್ನಾರ್ಮ್-2 ಎರಡರಲ್ಲೂ ಇದ್ದ ತುರ್ತು ರೈಲು ನಿಲುಗಡೆ ವ್ಯವಸ್ಥೆಯನ್ನು ಕಾರ್ಯನಿರ್ವಹಿಸುತ್ತಿದ್ದ ಸೆಕ್ಯುರಿಟಿ ಗಾರ್ಡ್‌ಗಳು ಬಳಸಿದರು.
ಹಳಿಯ ಮೇಲೆ ಬಿದ್ದ ಬಾಲಕನನ್ನು ತಕ್ಷಣವೇ ಪ್ಲಾಟ್ನಾರ್ಮ್ ಗೆ ಕರೆತರಲಾಯಿತು. ಸ್ಟೇಷನ್ ಕಂಟ್ರೋಲರ್ ಕೂಡಲೇ ಪ್ಲಾಟ್ನಾರ್ಮ್ ತಲುಪಿ ಬಾಲಕನನ್ನು ಪರೀಕ್ಷಿಸಿದಾಗ ಎಡ ಕಿವಿಯ ಹಿಂದೆ ಕೇವಲ ಸಣ್ಣ ಗಾಯಗಳು ಕಂಡುಬಂದವು. ಬೇರೆ ಯಾವುದೇ ಗಾಯಗಳು ಕಂಡು ಬಂದಿಲ್ಲ.
ಹೆಚ್ಚಿನ ಚಿಕಿತ್ಸೆಗಾಗಿ ಮೆಟ್ರೋ ಭದ್ರತಾ ಸಿಬ್ಬಂದಿಯ ಜೊತೆಗೆ ಅವರ ತಾಯಿ ಮತ್ತು ಬಾಲಕನನ್ನು ಸರ್ ಸಿವಿ ರಾಮನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಯಾವುದೇ ಅಸಹಜತೆ ಕಂಡುಬಂದಿಲ್ಲ ಎಂದು ತಿಳಿಸಿದರು ಹಾಗೂ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅಲ್ಲಿ ನಡೆಸಿದ ಸ್ಕ್ಯಾನಿಂಗ್ ವರದಿಯಲ್ಲಿ ಯಾವುದೇ ಅಸಹಜತೆ ಕಂಡುಬಂದಿಲ್ಲ. ಹೀಗಾಗಿ ಬಾಲಕನನ್ನು ಡಿಸ್ಚಾರ್ಜ ಮಾಡಲಾಯಿತು. ಎಲ್ಲಾ ಕ್ಲಿಯರೆನ್ಸ್ ಪಡೆದ ನಂತರ ರಾತ್ರಿ 21:15 ಗಂಟೆಗೆ ಎಂದಿನಂತೆ ರೈಲುಗಳ ಸೇವೆ ಪುನರ್ ಆರಂಭಿಸಲಾಯಿತು ಎಂದು ನಮ್ಮ ಮೆಟ್ರೋ ತಿಳಿಸಿದೆ.