ಮೆಟ್ರೋ ಮತ್ತಷ್ಟು ವಿಸ್ತಾರ ೩ನೇ ಹಂತ ಯೋಜನೆ ಸಿದ್ಧ
01:56 AM Feb 17, 2024 IST | Samyukta Karnataka
ಜನರ ಜೀವನಾಡಿಯಾಗಿರುವ ಮೆಟ್ರೋ ಮಾರ್ಗವನ್ನು ಇನ್ನಷ್ಟು ವಿಸ್ತರಿಸಲು ಸರ್ಕಾರ ಮುಂದಾಗಿದೆ. ಮೆಟ್ರೋ ಮೂರನೇ ಹಂತದ ನಿರ್ಮಾಣಕ್ಕೆ ೧೫,೬೧೧ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಿದ್ಧವಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯಲಾಗುತ್ತಿದೆ. ಈ ಹಂತದಲ್ಲಿ ಸರ್ಜಾಪುರದಿಂದ ಅಗರ, ಕೋರಮಂಗಲ ಡೈರಿ ವೃತ್ತ, ಮೇಖ್ರಿ ವೃತ್ತ, ಮೂಲಕ ಹೆಬ್ಬಾಳವನ್ನು ಸಂಪರ್ಕಿಸುವ ಮಾರ್ಗ ನಿರ್ಮಾಣದ ಡಿಪಿಆರ್ ಕರಡು ಸಿದ್ಧಗೊಂಡಿದ್ದು, ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗುತ್ತದೆ. ಮೆಟ್ರೋ ೨ ಮತ್ತು ೨ಎ ಹಂತದ ಯೋಜನೆ ೨೦೨೬ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ೭೪ ಕಿಲೋಮೀಟರ್ ಮಾರ್ಗಕ್ಕೆ ೨೦೨೫ರ ಮಾರ್ಚ್ ವೇಳೆಗೆ ೪೪ ಕಿಲೋಮೀಟರ್ ಸೇರ್ಪಡೆಯಾಗಲಿದೆ. ಬೆಂಗಳೂರು ಉಪನಗರ ರೈಲು ಯೋಜನೆ ಚುರುಕುಗೊಳಿಸಿ, ಕಾರಿಡಾರ್-೪ರ ಹೀಲಲಿಗೆಯಿಂದ ರಾಜಾನುಕುಂಟೆವರೆಗಿನ ೪೬.೨ ಕಿಲೋಮೀಟರ್ ಉದ್ದದ ಮಾರ್ಗದ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ.