ಮೇಕ್ ಇನ್ ಇಂಡಿಯಾ : ಭಾರತದ ಪ್ರಗತಿ ಮುಂದುವರಿಯುತ್ತದೆ...
ನವದೆಹಲಿ: ನಮ್ಮ ದೇಶವನ್ನು ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವನ್ನಾಗಿ ಮಾಡುವ 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪದ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ
ಮೇಕ್ ಇನ್ ಇಂಡಿಯಾ 10ನೇ ವಾರ್ಷಿಕೋತ್ಸವ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇಂದು ನಾವು #10YearsOfMakeInIndia ವನ್ನು ಆಚರಿಸುತ್ತಿದ್ದೇವೆ. ಕಳೆದ ಒಂದು ದಶಕದಲ್ಲಿ ಈ ಆಂದೋಲನವನ್ನು ಯಶಸ್ವಿಗೊಳಿಸಲು ಅವಿರತವಾಗಿ ಶ್ರಮಿಸಿದ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ. 'ಮೇಕ್ ಇನ್ ಇಂಡಿಯಾ' ನಮ್ಮ ದೇಶವನ್ನು ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವನ್ನಾಗಿ ಮಾಡುವ 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪದ ಸಂಕೇತವಾಗಿದೆ. ವಿವಿಧ ವಲಯಗಳ ರಫ್ತು, ಉತ್ಪಾದನಾ ಸಾಮರ್ಥ್ಯದ ಬೆಳವಣಿಗೆಯಿಂದಾಗಿ ಆರ್ಥಿಕತೆಯು ಹೇಗೆ ಬಲಗೊಂಡಿದೆ ಎಂಬುದು ಗಮನಾರ್ಹವಾಗಿದೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ 'ಮೇಕ್ ಇನ್ ಇಂಡಿಯಾ'ವನ್ನು ಉತ್ತೇಜಿಸಲು ಭಾರತ ಸರ್ಕಾರ ಬದ್ಧವಾಗಿದೆ. ಸುಧಾರಣೆಗಳಲ್ಲಿ ಭಾರತದ ಪ್ರಗತಿ ಮುಂದುವರಿಯುತ್ತದೆ. ನಾವೆಲ್ಲರೂ ಒಟ್ಟಾಗಿ ಆತ್ಮನಿರ್ಭರ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸೋಣ! ಎಂದಿದ್ದಾರೆ.