For the best experience, open
https://m.samyuktakarnataka.in
on your mobile browser.

ಮೇ ೧೨ರಂದು ಕಾಮೆಡ್ ಕೆ ಪ್ರವೇಶ ಪರೀಕ್ಷೆ

02:00 AM Feb 07, 2024 IST | Samyukta Karnataka
ಮೇ ೧೨ರಂದು ಕಾಮೆಡ್ ಕೆ ಪ್ರವೇಶ ಪರೀಕ್ಷೆ

ಬೆಂಗಳೂರು: ರಾಜ್ಯ ಸೇರಿದಂತೆ ರಾಷ್ಟ್ರದ ೪೦೦ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ ಮೇ ೧೨ರ ಭಾನುವಾರ ಎಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳಿಗೆ ಕಾಮೆಡ್ ಕೆ ಆನ್‌ಲೈನ್ ಪರೀಕ್ಷೆ ನಡೆಯಲಿದೆ.
ರಾಜ್ಯದ ೧೫೦ಕ್ಕೂ ಇಂಜಿನಿಯರಿಂಗ್ ಕಾಲೇಜು, ದೇಶದ ೫೦ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ಕಾಮೆಡ್-ಕೆ ಯುಜಿಇಟಿ ಮತ್ತು ಯುನಿ-ಗೇಜ್ ಪರೀಕ್ಷೆ ನಡೆಯಲಿದೆ ಎಂದು ಕಾಮೆಡ್ ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟçದ ೨೦೦ಕ್ಕೂ ಅಧಿಕ ನಗರಗಳ ೪೦೦ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ರಾಷ್ಟçವ್ಯಾಪಿ ಅರ್ಹ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಈ ಬಾರಿ ಅಂದಾಜು ೧ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ೪. ಮೈಸೂರು, ಕಲಬುರಗಿ, ಮಂಗಳೂರು ಮತ್ತು ಬೆಳಗಾವಿಗಳಲ್ಲಿ ತಲಾ ಒಂದು ಕೇಂದ್ರ ಇದೆ.
ಅತ್ಯಾಧುನಿಕ ಕೇಂದ್ರಗಳು ೫೦೦೦ ಚದರ ಅಡಿಗಳಷ್ಟು ವಿಶಾಲವಾಗಿವೆ. ವುಡ್ ರೂಟಿಂಗ್, ಲೇಸರ್ ಕಟ್, ೩ಡಿ ಪ್ರಿಂಟರ್, ಎಆರ್-ವಿಆರ್ ಉಪಕರಣಗಳು, ಕಂಪ್ಯೂಟರ್ ತಂತ್ರಾಂಶಗಳು, ಯುಐ-ಯುಎಕ್ಸ್ ಪರಿಕರಗಳು ಸೇರಿದಂತೆ ಹತ್ತಾರು ಸುಧಾರಿತ ಸಾಧನ, ತಂತ್ರಜ್ಞಾನಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. ಎರಾ ಫೌಂಡೇಷನ್‌ನ ಸಿಇಓ ಮುರಳೀಧರ ಇದ್ದರು.
ಅರ್ಜಿ ಎಲ್ಲಿ ಸಲ್ಲಿಸಬೇಕು
ಸಕ್ತ ವಿದ್ಯಾರ್ಥಿಗಳು www.comedk.org ಅಥವಾ www.unigauge.com ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಫೆ. ೧ರಿಂದಲೇ ಆರಂಭವಾಗಿದೆ. ಏ. ೫ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇರಲಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಮೇಲಿನ ೨ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೇಳೆ ವಿದ್ಯಾರ್ಥಿಗಳು ಹಾಗೂ ಪಾಲಕರು ಜಾಗರೂಕರಾಗಿರಬೇಕು ಎಂದು ಡಾ. ಕುಮಾರ್ ಮನವಿ ಮಾಡಿದರು.