For the best experience, open
https://m.samyuktakarnataka.in
on your mobile browser.

ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್ ಬೀಳುತ್ತೆ…

04:38 PM Jan 26, 2025 IST | Samyukta Karnataka
ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್ ಬೀಳುತ್ತೆ…

ಕಿರುಕುಳ ತಡೆಗೆ ಹೊಸ ಕಾಯ್ದೆ ತರುವ ಬಗ್ಗೆಯೂ ಚರ್ಚೆ ಆಗಿದೆ

ಹಾಸನ: ಮುಂದಿನ ದಿನಗಳಲ್ಲಿ ಮೀಟರ್ ಬಡ್ಡಿ ದಂಧೆ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿಗೆ ಬ್ರೇಕ್ ಬೀಳುತ್ತೆ ಅನ್ನೋ ವಿಶ್ವಾಸ ನನಗಿದೆ ಎಂದು ಸಚಿವ ಕೆ.ಎನ್‌ ರಾಜಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ಕೊಟ್ಟಾಗ ನಾವು ಕ್ರಮ ಕೈಗೊಳ್ಳಬಹುದು, ಹೀಗೆ ಕಿರುಕುಳ ಕೊಡೋರಿಗೆ ಕಠಿಣ ಶಿಕ್ಷೆಯಾಗಬೇಕು. ಹಾಸನ ಜಿಲ್ಲೆಯಲ್ಲೂ ಈ ಸಮಸ್ಯೆ ಸಾಕಷ್ಟಿದೆ. ಕೆಲ ಸಂಸ್ಥೆಗಳು ಆರ್‌ಬಿಐ ಅನುಮತಿ ಪಡೆದು ಫೈನಾನ್ಸ್ ನಡೆಸುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ಕೊಟ್ಟಾಗ ನಾವು ಕ್ರಮ ಕೈಗೊಳ್ಳಬಹುದು. ಹಾಗಾಗಿ ಸಿಎಂ ಸಭೆ ಮಾಡಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇಂತಹ ಕಿರುಕುಳ ತಡೆಗೆ ಹೊಸ ಕಾಯ್ದೆ ತರುವ ಬಗ್ಗೆಯೂ ಚರ್ಚೆ ಆಗಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಆಗಲಿದೆ. ನಿನ್ನೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದಕ್ಕಾಗಿ ನಿನ್ನೆ ರಜೆ ಇದ್ದರೂ ಸಿಎಂ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.

Tags :