For the best experience, open
https://m.samyuktakarnataka.in
on your mobile browser.

ಮೈಮೇಲೆ ಸಾಂಬಾರು ಬಿದ್ದು ಮಹಿಳೆಗೆ ಗಂಭೀರ ಗಾಯ

09:46 PM Aug 19, 2023 IST | Samyukta Karnataka
ಮೈಮೇಲೆ ಸಾಂಬಾರು ಬಿದ್ದು ಮಹಿಳೆಗೆ ಗಂಭೀರ ಗಾಯ

ಮುಂಡಗೋಡ: ಬಿಸಿ ಸಾಂಬಾರ ತೆಗೆದುಕೊಂಡು ಹೋಗುವ ವೇಳೆ ಅಡುಗೆ ಸಹಾಯಕಿ ಕಾಲು ಜಾರಿ ಬಿದ್ದಾಗ ಮೈ ಮೇಲೆ ಬಿಸಿ ಸಾಂಬಾರ ಬಿದ್ದ ಪರಿಣಾಮ ಮಹಿಳೆಯ ದೇಹವು ತೀವ್ರ ಸುಟ್ಟು ಗಾಯಗೊಂಡ ಘಟನೆ ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದಿದೆ.
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಡುಗೆ ಸಹಾಯಕಿ ಅನ್ನಪೂರ್ಣ ಹುಳ್ಯಾಳ(೪೯) ಗಾಯಗೊಂಡ ಮಹಿಳೆ. ಅಡುಗೆ ಮನೆಯಿಂದ ಶಾಲಾ ಮಕ್ಕಳಿಗೆ ಸಾಂಬಾರ ಬಡಿಸಲು ಮತ್ತೋರ್ವ ಅಡುಗೆ ಸಹಾಯಕಿ ಪಾರ್ವತಿ ಎಂಬುವರ ಜೊತೆ ಸೇರಿ ಸಾಂಬಾರ ಪಾತ್ರೆ ತರುವಾಗ ಅನ್ನಪೂರ್ಣ ಕಾಲು ಜಾರಿ ಬಿದ್ದ ಪರಿಣಾಮ ಬಿಸಿ ಸಾಂಬಾರ ಅವರ ಮೈ ಮೇಲೆ ಬಿದ್ದಿದೆ. ಇದರಿಂದ ಅವರ ದೇಹವು ತೀವ್ರ ಸುಟ್ಟು ಗಾಯವಾಗಿದೆ. ಗಾಯಗೊಂಡ ಅಡುಗೆ ಸಹಾಯಕಿಯನ್ನು ಕೂಡಲೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ಸಾಗಿಸಲಾಗಿದೆ.