ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೈಸೂರು ದಸರಾ ಕವಿಗೋಷ್ಠಿಗೆ ಡಾ.ಪ್ರವೀಣ್ ಆಯ್ಕೆ

02:07 PM Oct 06, 2024 IST | Samyukta Karnataka

ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಪ್ರವೀಣ್ ಪೊಲೀಸ್ ಪಾಟೀಲ ಮೈಸೂರಿನ ದಸರಾ ಕವಿಗೋಷ್ಠಿ ಆಯ್ಕೆ ಆಗಿದ್ದು, ಹೆಮ್ಮೆಯ ಸಂಗತಿ.

ಜಿಲ್ಲೆಗೆ ಒಬ್ಬರಂತೆ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ‌. ಜಿಲ್ಲೆಯಿಂದ ಯಲಬುರ್ಗಾ ತಾಲ್ಲೂಕಿನ ತರಲಕಟ್ಟಿ ಗ್ರಾಮದವರಾಗಿದ್ದು, ಕನ್ನಡ ರಂಗಭೂಮಿ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಗೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಇವರು ಕನ್ನಡ ಕಾವ್ಯ ಹಾಗೂ ಕಥಾ ಸಾಹಿತ್ಯ ಪ್ರಕಾರಗಳ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನವರು ಕೊಡಮಾಡುವ ಬೇಂದ್ರೆ ಕಾವ್ಯ ಬಹುಮಾನ ಹಾಗೂ ಅ.ನ.ಕೃ, ಕಥಾ ಬಹುಮಾನ, ಗುಲಬರ್ಗಾ ವಿಶ್ವವಿದ್ಯಾಲಯದ ಜಯತೀರ್ಥ ರಾಜಪುರೋಹಿತ ಕಥಾ ಪುರಸ್ಕಾರ, ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕ ವಿದ್ಯಾರ್ಥಿ ಕಥಾ ಬಹುಮಾನ ಸೇರಿ ವಿವಿಧ ಪ್ರಶಸ್ತಿ ಮತ್ತು ಪುರಸ್ಕಾರಗಳು ಲಭಿಸಿವೆ.

ಇವರ 'ನಿರ್ದೇಶಕಿಯಾದ ನನ್ನವ್ವ' ಕಥೆಯು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ವಿಭಾಗಕ್ಕೆ ಪಠ್ಯವಾಗಿದೆ. 'ಒಡಲು ಚಿಗುರು' ಎನ್ನುವ ಇವರ ಕೃತಿಯು 2021ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಗೊಂಡಿದೆ. ಇವರು ಪ್ರಸ್ತುತ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅ. 9ರಂದು ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಅಖಂಡ ಕರ್ನಾಟಕದ ಪ್ರಕಾಂಡ ಪಂಡಿತ ಮಂಡಳಿಯಿಂದ ನಡೆಯುವ ಸುವರ್ಣ ಕರ್ನಾಟಕದ 31 ರಾಜ್ಯಗಳ ತನುಜಾತರ ಕವಿ ಪ್ರತಿಭೆ-ಪ್ರಬುದ್ಧತೆಯ ಬಹುತ್ವದ ಅನಾವರಣದ ಕವಿಗೋಷ್ಠಿಯಲ್ಲಿ ಡಾ.ಪ್ರವೀಣ್ ಪೊಲೀಸ್ ಪಾಟೀಲ ಕವನ ವಾಚನ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಲಿದ್ದಾರೆ.

Next Article