ಮೈಸೂರು ಶೂಟಿಂಗ್ ಕ್ಲಬ್‌ಗೆ 3 ಪದಕಗಳ ಗರಿಎಂ.ಎಸ್.ಪುಣ್ಯಗೆ ಬೆಳ್ಳಿ-ಕಂಚು: ವರ್ಷಿಣಿಗೆ ಕಂಚಿನ ಪದಕ
ಬೆಂಗಳೂರು : ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ 12ನೇ ಶೂಟಿಂಗ್ ಸ್ಪರ್ಧೆಯಲ್ಲಿ ಮೈಸೂರು ಶೂಟಿಂಗ್ ಕ್ಲಬ್ ಶೂಟರ್‌ಗಳು 3 ವೈಯುಕ್ತಿಕ ಪದಕಗಳನ್ನು ಮುಡಿಗೇರಿಸಿಕೊಂಡು ಕೀರ್ತಿ ತಂದಿದ್ದಾರೆ.
ಮೈಸೂರು ಕ್ಲಬ್‌ನ 6 ಶೂಟರ್‌ಗಳು ಪ್ರಥಮಬಾರಿಗೆ .177 ಮತ್ತು .22(50ಮೀ.ಫೈರ್ ಆಮ್ಸ್)ಪೀಪ್ ಸೈಟ್ ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸಿ ದಕ್ಷಿಣ ವಲಯಕ್ಕೆ ಆಯ್ಕೆಯಾಗಿದ್ದಾರೆ.
ಪುಣ್ಯಗೆ ಬೆಳ್ಳಿ ಪದಕ :
ಮೈಸೂರು ಶೂಟಿಂಗ್ ಕ್ಲಬ್‌ನಲ್ಲಿ ಕಳೆದ ಎರಡು ತಿಂಗಳಿಂದ ತರಬೇತಿ ಪಡೆಯುತ್ತಿದ್ದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮಂಡ್ಯದ ಎಂ.ಎಸ್.ಪುಣ್ಯ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿ ವಿಜೇತರಾಗಿದ್ದಾರೆ.
ವರ್ಷಿಣಿಗೆ ಕಂಚು :
ಮೈಸೂರಿನ ಪಿಯುಸಿ ವಿದ್ಯಾರ್ಥಿನಿ ಪಿ.ವರ್ಷಿಣಿ ಕಂಚಿನ ಪದಕ ಗಳಿಸಿ ಕೀರ್ತಿ ತಂದಿದ್ದಾರೆ. ಶೂಟರ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹಾಸನದ ತನೈಚಂದ್ರ, ನಂದಿತಾ ರವಿಚಂದ್ರ, ಕಾವ್ಯ, ಬೆಂಗಳೂರಿನ ಚೇತನ ಓಬುಲಕ್ಷ್ಮಿ ಉತ್ತಮ ಪ್ರದರ್ಶನ ನೀಡಿ ದಕ್ಷಿಣ ವಲಯಕ್ಕೆ ಆಯ್ಕೆಯಾಗಿದ್ದಾರೆ.
ದಶನ್‌ಕುಮಾರ್ ಆಯ್ಕೆ : ಮೈಸೂರು ಶೂಟಿಂಗ್ ಕ್ಲಬ್ ಕೂಚ್ ಹಾಗೂ ರೈಫಲ್ ತರಬೇತುದಾರರಾದ ಬಿ.ಆರ್.ದರ್ಶನ್‌ಕುಮಾರ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ದಕ್ಷಿಣ ವಲಯಕ್ಕೆ ಆಯ್ಕೆಯಾಗಿದ್ದಾರೆ.
ಮೈಸೂರು ಶೂಟಿಂಗ್ ಕ್ಲಬ್ ಕೋಚ್ ಪ್ಯಾರ ಶೂಟರ್ ಬಿ.ಆರ್.ದರ್ಶನ್‌ಕುಮಾರ್ ಅವರಿಂದ ತರಬೇತಿ ಪಡೆದು ಮೈಸೂರು ವಿಭಾಗಕ್ಕೆ ಕೀರ್ತಿ ತಂದ ಕ್ಲಬ್‌ನ 7 ಶೂಟರ್‌ಗಳನ್ನು ರಾಷ್ಟçಮಟ್ಟದ ಶೂಟರ್ ಕೋಚ್ ಹುಬ್ಬಳ್ಳಿಯ ರವಿಚಂದ್ರ ಬಾಳೆಹೊಸೂರು ಅಭಿನಂದಿಸಿದ್ದಾರೆ.
ಇತಿಹಾಸಲ್ಲೇ ಪ್ರಥಮ ಸಾಧನೆ
ವಿಕಲಚೇತನರಾದರೂ ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿರುವ ಪ್ಯಾರ ಶೂಟರ್ ಬಿ.ಆರ್.ದರ್ಶನ್‌ಕುಮಾರ್ ರೈಫಲ್ ಶೂಟಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಸಾಹಸಿಗಳಿಗೆ ಉತ್ತಮ ತರಬೇತಿ ನೀಡಿ ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳನ್ನು ದಕ್ಷಿಣವಲಯಕ್ಕೆ ಆಯ್ಕೆಯಾಗುವಂತೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.