ಮೊಯ್ಲಿ ಅವರೇ.. ಸಾಹಿತ್ಯ ಅಸಲಿಯೋ ಅಥವಾ ನಕಲಿಯೋ?
ಬೆಂಗಳೂರು: ನೀವು ಈವರೆಗೂ ರಚನೆ ಮಾಡಿರುವ ಸಾಹಿತ್ಯ ಅಸಲಿಯೋ ಅಥವಾ ನಕಲಿಯೋ? ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವೀರಪ್ಪ ಮೊಯ್ಲಿ ಅವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು ದೇಶ ಕಲ್ಯಾಣಕ್ಕಾಗಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಶ್ರದ್ದೆಯಿಂದ 11 ದಿನಗಳ ಕಾಲ ಎಳನೀರು ಕುಡಿಯುವ ಮೂಲಕ ಉಪವಾಸ ವ್ರತ ಆಚರಣೆ ಮಾಡಿರುವುದು ಸುಳ್ಳು ಎನ್ನುವುದಾದರೆ, ನೀವು ಈವರೆಗೂ ರಚನೆ ಮಾಡಿರುವ ಸಾಹಿತ್ಯ ಅಸಲಿಯೋ ಅಥವಾ ನಕಲಿಯೋ? ಮಾನ್ಯ ವೀರಪ್ಪ ಮೊಯ್ಲಿ ಅವರೇ. ಜೀವನದುದ್ದಕ್ಕೂ ಇನ್ನೊಬ್ಬರ ಬಗ್ಗೆಯೇ ಪಿಟ್ಟಿಂಗ್ ಇಟ್ಟೇ ದೆಹಲಿ ಜನ್ ಪಥ್ ಗೆ ಹತ್ತೀರವಾಗಿದ್ದ ನೀವು, ಕರ್ನಾಟಕದ ಒಬ್ಬ ಪ್ರಬುದ್ದ ರಾಜಕರಾಣಿ ಹಾಗೂ ಸಾಹಿತಿ ಎಂದು ಭಾವಿಸಿದ್ದೇ ನಮಗೆ ತಪ್ಪಾಯಿತು ಎನಿಸುತ್ತಿದೆ.ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಶ್ವತ ಮೊಳೆ ಹೊಡೆದ (ಕು)ಖ್ಯಾತಿ ನಿಮಗಲ್ಲದೆ ಬೇರೆ ಯಾರಿಗೆ ಸಲ್ಲಬೇಕು? ಕಳದೆ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಹೀನಾಯವಾಗಿ ಸೋತ ಬಳಿಕ ಐದು ವರ್ಷಗಳಿಂದ ನಾಪತ್ತೆಯಾಗಿದ್ದ ನೀವು, ಪ್ರದಾನಿ ಮೋದಿ ಅವರನ್ನು ಟೀಕೆ ಮಾಡಿ ಟಿಕೆಟ್ ಗಿಟ್ಟಿಸಬಹುದು ಎಂಬ ದೂರಲೋಚನೆಯಿಂದ ಹೊರ ಬಂದರೆ ಒಳ್ಳೆಯದು. ಇತ್ತೀಚಿಗೆ ಕಾಂಗ್ರೆಸ್ ನಾಯಕರಿಗೆ ಮೋದಿ ಪೋಬಿಯಾ ಹಿಡಿದಿದ್ದು, ಬಾಯಿಗೆ ಬಂದಂತೆ ಮಾತನಾಡುವುದೇ ನಮ್ಮ ಪಕ್ಷದ ಸಂಸ್ಕ್ರತಿ ಎನ್ನುತ್ತಿದ್ದಾರೆ. ಈಗಲಾದರೂ ಬಾಯಿಗೆ ಬೀಗ ಹಾಕಿಕೊಂಡು ರಾಷ್ಟ್ರ ನಾಯಕರ ಬಗ್ಗೆ ಗೌರವದಿಂದ ಮಾತನಾಡಿದರೆ ಒಳಿತು. ಇಲ್ಲದಿದ್ದರೆ ನಾವು ಕೂಡಾ ಅದೇ ದಾಟಿಯಲ್ಲಿ ಮಾತನಾಡಬೇಕಾಗುತ್ತದೆ. ಪ್ರಧಾನಿ ಮೋದಿಜಿ ಅವರು ಹಿಂದುಳಿದ ಜಾತಿಗೆ ಸೇರಿದವರು ಅನ್ನುವ ಕಾರಣಕ್ಕೆ ನಿಂದನೆ ಮಾಡುತ್ತೀರಲ್ಲಾ ಮೊಯ್ಲಿ ಅವರೆ.ಇದೇನಾ ನಿಮ್ಮ ಕಾಂಗ್ರೆಸ್ ಪಕ್ಷದ ಜಾತ್ಯತೀತತೆ ಇದೇನಾ? ನಿಮ್ಮ ಪಕ್ಷದ ಸಮಾಜವಾದ ಇದೇನಾ? ನಿಮ್ಮ ಪಕ್ಷದ ಸಾಮಾಜಿಕ ನ್ಯಾಯ ಇದೇನಾ? ನಿಮ್ಮ ಕಾಂಗ್ರೆಸ್ ಪಕ್ಷ, ನೀವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಕೊಡುವ ಗೌರವ? ವೀರಪ್ಪ ಮೊಯ್ಲಿ ಅವರು ಈ ವಿಚಾರದಲ್ಲಿ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಮೊಯ್ಲಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ನೀವು ಎಷ್ಟೇ ಮೋದಿ ಅವರನ್ನು ಟೀಕೆ ಮಾಡಿದರೂ ಕೋಟಿ ಕೋಟಿ ಭಾರತೀಯರ ಹೃದಯದಲ್ಲಿ ಅವರು ಶಾಶ್ವತವಾಗಿ ನೆಲೆಯೂರಿದ್ದಾರೆ. ಎಷ್ಟೇ ತಿಪ್ಪರಾಲಾಗ ಹಾಕಿದರೂ ಚಿಕ್ಕಬಳ್ಳಾಪುರಕ್ಕೆ ಟಿಕೆಟ್ ಸಿಗುವುದಿಲ್ಲ. ಈಗಾಗಲೇ "ಕಾವೇರಿಯಲ್ಲೇ " ನಿಮಗೆ ಖೆಡ್ಡಾ ತೋಡಲು ವೇದಿಕೆ ಸಿದ್ದವಾಗುತ್ತಿದೆ ಎಂಬುದನ್ನು ಮರೆಯಬೇಡಿ ಎಂದು ಬರೆದುಕೊಂಡಿದ್ದಾರೆ.