ಮೋದಿಗೆ ನೈಜೀರಿಯಾದ ೨ನೇ ಅತ್ಯುನ್ನತ ಪ್ರಶಸ್ತಿ
10:25 PM Nov 17, 2024 IST | Samyukta Karnataka
ಅಬುಜಾ: ತ್ರಿರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಯನ್ನು ನೀಡಿ ಸನ್ಮಾನಿಸಲಾಗಿದೆ. `ದ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಅರ್ಡರ್ ಆಫ್ ದ ನೈಜಿರಿಯಾ' ಪ್ರಶಸ್ತಿಯನ್ನು ಆ ದೇಶದ ಅಧ್ಯಕ್ಷ ಬೊಲಾ ಅಹ್ಮದ್ ಟಿನುಬು ಪ್ರಧಾನಿ ಮೋದಿ ಅವರಿಗೆ ನೀಡಿದ್ದಾರೆ. ೧೯೬೯ರಲ್ಲಿ ರಾಣಿ ಎಲಿಜಬೆತ್‌ಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಅದಾದ ನಂತರ ಈ ಪ್ರಶಸ್ತಿ ಸ್ವೀಕರಿಸುತ್ತಿರುವ ಎರಡನೇ ವಿದೇಶಿ ನಾಯಕ ನರೇಂದ್ರ ಮೋದಿ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ಭಾರತ-ನೈಜೀರಿ ಯಾದ ಬಾಂಧವ್ಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಆಳವಾಗಿ ಬೇರೂರಿರುವ ಬಾಂಧವ್ಯವನ್ನು ಆಧರಿಸಿವೆ. ಎರಡೂ ದೇಶಗಳ ಅಭಿವೃದ್ಧಿಗಾಗಿ ಕೆಲಸ ಮಾಡಲು ಭಾರತ ಬದ್ಧವಾಗಿದೆ ಎಂದರು. ಮೋದಿಯವರ ಆಗಮನದಿಂದ ಪಶ್ಚಿಮ ಆಫ್ರಿಕಾದ ದೇಶವೊಂದಕ್ಕೆ ಭಾರತದ ಪ್ರಧಾನಿಯೊಬ್ಬರು ೧೭ ವರ್ಷಗಳ ನಂತರ ಕಾಲಿಟ್ಟಂತಾಗಿದೆ.