For the best experience, open
https://m.samyuktakarnataka.in
on your mobile browser.

ಮೋದಿ ಅಕ್ಕಿ ಕಳ್ಳತನವಾದರೂ ಮೌನವಾಗಿರುವುದೇಕೆ?

04:21 PM Jan 29, 2024 IST | Samyukta Karnataka
ಮೋದಿ ಅಕ್ಕಿ ಕಳ್ಳತನವಾದರೂ ಮೌನವಾಗಿರುವುದೇಕೆ

ಬೆಂಗಳೂರು: ಮಣಿಕಂಠ ರಾಥೋಡ್ ಸಹೋದರನ ರೈಸ್ ಮಿಲ್‌ನಲ್ಲಿ ಮತ್ತೊಮ್ಮೆ 600 ಕ್ವಿಂಟಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.‌
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು "ಪಡಿತರ ಅಕ್ಕಿ ಬಡವರಿಗೆ ಅನ್ನಭಾಗ್ಯವಾಗುವ ಬದಲು ಬಿಜೆಪಿ ಭ್ರಷ್ಟರಿಗೆ ಕನ್ನ ಭಾಗ್ಯವಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಸಹೋದರನ ರೈಸ್ ಮಿಲ್ ನಲ್ಲಿ 700 ಕ್ವಿಂಟಲ್ ಪಡಿತರ ಅಕ್ಕಿಯನ್ನು ಅಕ್ಕಿ ವಶಪಡಿಸಿಕೊಳ್ಳಲಾಗಿತ್ತು, ಈಗ ಮತ್ತೊಮ್ಮೆ ಗೋಡೌನ್ ನಲ್ಲಿ 600 ಕ್ವಿಂಟಲ್ ವಶಪಡಿಸಿಕೊಳ್ಳಲಾಗಿದೆ. ಮೋದಿ ಅಕ್ಕಿ ಎನ್ನುವ ಬಿಜೆಪಿಗರು ಅದೇ ಮೋದಿ ಅಕ್ಕಿಯ ಕಳ್ಳತನವಾದರೂ ಮೌನವಾಗಿರುವುದೇಕೆ? ಇದು ಮೋದಿಗೆ ಕರ್ನಾಟಕ ಬಿಜೆಪಿ ಮಾಡುವ ಮಹಾ ಅವಮಾನವಲ್ಲವೇ?
ಈ ಮೌನಕ್ಕೆ ಕಾರಣ ಮೋದಿ ಬಗ್ಗೆ ನಿರಾಸಕ್ತಿಯೇ ಅಥವಾ ಅಕ್ಕಿ ಮೇಲಿನ ಆಸೆಯೇ!? ಕರಿ ಕೋಟು ಹಾಕದೆಯೇ ಮಣಿಕಂಠ ರಾಥೋಡನ ಪರ ವಕಾಲತ್ತು ವಹಿಸುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈ ಅಕ್ಕಿ ಕಳ್ಳತನದ ಹೊಣೆಯನ್ನು ತಾವೇ ಹೊರುವುದಕ್ಕೆ ತಯಾರಿದ್ದಾರಾ? ಶ್ರೀರಾಮನಿಗಿಂತ, ಮಣಿಕಂಠನ ಮೇಲೆ ಹೆಚ್ಚು ಭಕ್ತಿ ಹೊಂದಿರುವಂತೆ ತೋರುತ್ತಿದೆ. ರಾಜು ರಾಥೋಡ್ ಮೋದಿ ಅಕ್ಕಿ ಕದಿಯುವುದಕ್ಕೆ, ಮಣಿಕಂಠ ರಾಥೋಡ್ ನೇಪಾಳಕ್ಕೆ ಓಡಿ ಹೋಗುವುದಕ್ಕೆ ಬಿಜೆಪಿ ನಾಯಕರ ಸಲಹೆ, ಸಹಕಾರ ಇದೆಯೇ? ಪಡಿತರ ಅಕ್ಕಿಗೆ “ಮೋದಿ ಅಕ್ಕಿ” ಎಂದು ನಾಮಕರಣ ಮಾಡಿದ್ದ ಬಿಜೆಪಿಗರು ಈ ಕಳ್ಳತನವನ್ನು ಸಮರ್ಥಿಸಲು “ಮಣಿಕಂಠನ ಅಕ್ಕಿ“ ಎಂದು ಹೇಳಿದರೂ ಆಶ್ಚರ್ಯವಿಲ್ಲ! ಎಂದು ಬರೆದುಕೊಂಡಿದ್ದಾರೆ.