ಮೋದಿ ಅವರ ಮೇಲಿನ ದ್ವೇಷ ಭಾರತದ ಮೇಲಿನ ದ್ವೇಷ ಆಗುವುದು ಬೇಡ
ಬೆಂಗಳೂರು: ಮೋದಿ ಅವರ ಮೇಲಿನ ದ್ವೇಷ ಭಾರತದ ಮೇಲಿನ ದ್ವೇಷ ಆಗುವುದು ಬೇಡ ಎಂದು ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು ದೇಶಪ್ರೇಮಕ್ಕೂ ಪಕ್ಷಪ್ರೇಮಕ್ಕೂ ಇರುವ ವ್ಯತ್ಯಾಸ! ಅದು 2014ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭ. ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅಂದಿನ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನ ಅವಮಾನಿಸಿದಾಗ, ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಪಾಕ್ ನಡೆಯನ್ನ ಬಹಿರಂಗ ಸಭೆಯಲ್ಲಿ ಖಂಡಿಸಿ, ಭಾರತದ ಪ್ರಧಾನಿಯ ಅವಮಾನ ಸಹಿಸಲ್ಲ ಎಂದು ಪಾಕ್‌ಗೆ ತಿರುಗೇಟು ನೀಡಿದ್ದರು. ಆದರೆ ಈಗ ಮಾಲ್ಡೀವ್ಸ್ ನ ಮಂತ್ರಿಗಳು ಪ್ರಧಾನಿ ಮೋದಿ ಅವರ ನಿಂದನೆ ಮಾಡಿರುವಾಗ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾರತವನ್ನ ಸಮರ್ಥನೆ ಮಾಡುತ್ತಿಲ್ಲ. ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರೇ, ಭಾರತದ ಪ್ರಧಾನಿಯ ನಿಂದನೆ ಮಾಡಿದ್ದು ತಪ್ಪು ಎಂದು ಸ್ವತಃ ಮಾಲ್ಡೀವ್ಸ್ ಪ್ರಧಾನಿಯೇ ಒಪ್ಪಿಕೊಂಡು ತಮ್ಮ ಮಂತ್ರಿಗಳನ್ನ ವಜಾ ಮಾಡಿದ್ದಾರೆ. ಇನ್ನು ತಮ್ಮ ತಕರಾರೇನು? ಮೋದಿ ಅವರ ಮೇಲಿನ ದ್ವೇಷ ಭಾರತದ ಮೇಲಿನ ದ್ವೇಷ ಆಗುವುದು ಬೇಡ ಎಂದಿದ್ದಾರೆ.