For the best experience, open
https://m.samyuktakarnataka.in
on your mobile browser.

ಮೋದಿ ಪ್ರಧಾನಿಯಾದ ಬಳಿಕ ಕಡಿಮೆಯಾದ ಬಾಂಬ್ ಸ್ಫೋಟ

03:39 PM Apr 14, 2024 IST | Samyukta Karnataka
ಮೋದಿ ಪ್ರಧಾನಿಯಾದ ಬಳಿಕ ಕಡಿಮೆಯಾದ ಬಾಂಬ್ ಸ್ಫೋಟ

ಭಟ್ಕಳ: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದೆಲ್ಲೆಡೆ ಬಾಂಬ್ ಬ್ಲಾಸ್ಟ್ ಪ್ರಕರಣಗಳು ನಡೆಯುತ್ತಿದ್ದವು, ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಬಾಂಬ್ ಬ್ಲಾಸ್ಟ್ ಎನ್ನುವ ಶಬ್ದ ಕೇಳುತ್ತಿಲ್ಲ ಇದಕ್ಕಾಗಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಖ್ಯಾತ ವಾಗ್ಮಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ನಗರದ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ನಡೆದ "ನಮೋ ಭಾರತ-ಈಗ ಶುರುವಾಗಿದೆ ಭಾರತದ ಕಾಲ" ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದವರು ಕುಕ್ಕರ್ ಬ್ಲಾಸ್ಟ್ ಮಾಡಿದವರನ್ನು ನಮ್ಮ ಬ್ರದರ್ಸ್ ಎಂದು ಕರೆಯುತ್ತಾರೆ. ಬಾಂಬ್ ಬ್ಲಾಸ್ಟ್ ಮಾಡಿ ದುಷ್ಕೃತ್ಯ ಮಾಡುವರನ್ನು ರಕ್ಷಣೆ ಮಾಡಿ ಉಳಿಸುವ ಪ್ರಯತ್ನ ಮಾಡುತ್ತಾರೆ. ತಮಗೆ ರಕ್ಷಣೆಯಿದೆ ಎಂತಾದರೆ ಅವರು ಬಾಂಬ್ ಬ್ಲಾಸ್ಟ್ ಮಾಡಿ ಕರ್ನಾಟಕದಲ್ಲಿ ಇದ್ದರೆ ನನ್ನನ್ನು ಉಳಿಸುವವರು ಬೇಕಾದಷ್ಟು ಜನರಿದ್ದಾರೆ ಎಂಬ ಧೈರ್ಯದಿಂದ ಮತ್ತಷ್ಟು ಕೃತ್ಯ ಎಸಗುತ್ತಾರೆ. ಬೆಂಗಳೂರಿನ ಬಾಂಬ್ ಬ್ಲಾಸ್ ಪ್ರಕರಣದಲ್ಲಿ ಎನ್.ಐ.ಎ. ಪ್ರಕರಣ ಕೈಗೆತ್ತಿಕೊಂಡ ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಹೆಡೆಮುರಿಕಟ್ಟಿ ತಂದು ನಿಲ್ಲಿಸಿದ್ದಾರೆ. ಅದು ಹೊಸ ಭಾರತ, ಇಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದವರು ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎನ್ನುವ ಸಂದೇಶ ಹೋದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದರು.