For the best experience, open
https://m.samyuktakarnataka.in
on your mobile browser.

ಮೋದಿ ಫೋಟೋಗಾಗಿ ಕೋರ್ಟ್ ಮೊರೆ ಹೋದ ಈಶ್ವರಪ್ಪ

12:16 PM Apr 06, 2024 IST | Samyukta Karnataka
ಮೋದಿ ಫೋಟೋಗಾಗಿ ಕೋರ್ಟ್ ಮೊರೆ ಹೋದ ಈಶ್ವರಪ್ಪ

ಶಿವಮೊಗ್ಗ: ಪ್ರಧಾನಿ ಮೋದಿ ಭಾವಚಿತ್ರಕ್ಕಾಗಿ ಕೆ.ಎಸ್‌.ಈಶ್ವರಪ್ಪ ಕೋರ್ಟ್ ಮೊರೆ ಹೋಗಿದ್ದಾರೆ.
ಮೋದಿ ಭಾವಚಿತ್ರ ಬಳಸಲು ಅನುಮತಿ ಬೇಕೆಂದು ಕೋರಿ ಕೆ.ಎಸ್‌.ಈಶ್ವರಪ್ಪ ಕೋರ್ಟ್ ಮೊರೆ ಹೋಗಿದ್ದು ಕೋರ್ಟ್‌ನಲ್ಲಿ ಮೋದಿ ಭಾವಚಿತ್ರಕ್ಕಾಗಿ ಕೆವಿಯಟ್ ಸಲ್ಲಿಕೆ ಮಾಡಿದ್ದಾರೆ. ಕಾನೂನಾತ್ಮಕವಾಗಿ ತಡೆಯಲು ಪ್ರಯತ್ನಿಸಿದಂತೆ ಕೇವಿಯಟ್ ಸಲ್ಲಿಕೆ ಮಾಡಲಾಗಿದೆ. ಭಾರತದ ಪ್ರಧಾನಿಯ ಭಾವಚಿತ್ರವನ್ನು ಉಪಯೋಗಿಸುತ್ತಿದ್ದೇನೆ. ಸಂವಿಧಾನದಲ್ಲಿ ಪ್ರಧಾನಿ ಭಾವಚಿತ್ರವನ್ನು ಬಳಸಲು ಅವಕಾಶವಿದೆ. ಭಾವಚಿತ್ರದ ವಿರುದ್ಧ ದಾವೇ ಹೂಡಿದರೆ ತಡೆಯಲು ಕ್ರಮ ಕೈಗೊಳ್ಳಲು ಕೋರ್ಟ್‌ನಲ್ಲಿ ಕೆವಿಯಟ್ ಸಲ್ಲಿಕೆ ಮಾಡಲಾಗಿದೆ. ಕೇವಿಯಟ್ ಅವಧಿ 3 ತಿಂಗಳಾಗಿದ್ದು, ಅಷ್ಟರಲ್ಲಿ ಚುನಾವಣೆ ಮುಗಿಯುತ್ತೆ. ಹಾಗಾಗಿ ಯಾರೂ ಕೂಡ ತಡೆಯಾಜ್ಞೆ ತರಲು ಸಾಧ್ಯಯಿಲ್ಲ ಎಂಬುದು ಈಶ್ವರಪ್ಪ ಲೆಕ್ಕಾಚಾರವಾಗಿದೆ. ತಮ್ಮ ಚುನಾವಣಾ ಪ್ರಚಾರದ ವೇಳೆ ಈಶ್ವರಪ್ಪ ಮೋದಿ ಭಾವಚಿತ್ರ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಬಿಜೆಪಿ ಅಧಿಕೃತ ಅಭ್ಯರ್ಥಿ ವ್ಯಂಗ್ಯ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಈಶ್ವರಪ್ಪ ಮೋದಿ ಅವರ ಅಪ್ಪನ ಮನೆ ಆಸ್ತಿನಾ ಎಂದು ವ್ಯಂಗ್ಯ ಮಾಡಿದ್ದರು.