ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೋದಿ ೩.೦ ಸಂಪುಟ: ಇಂದು ರಾತ್ರಿ 7.15ಕ್ಕೆ ಪ್ರಮಾಣ ವಚನ

02:31 PM Jun 09, 2024 IST | Samyukta Karnataka

ನವದೆಹಲಿ: ಬಿಜೆಪಿ ನಾಯಕ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಅವಧಿಯ ಎನ್‌ಡಿಎ ಸರ್ಕಾರ ಭಾನುವಾರ ಅಸ್ತಿತ್ವಕ್ಕೆ ಬರಲಿದೆ.ರಾತ್ರಿ ೭.೧೫ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ರಾಷ್ಟ್ರಪತಿ ಭವನ ಖಚಿತಪಡಿಸಿದೆ.
ಎನ್‌ಡಿಎ ಪ್ರಮುಖ ಪಕ್ಷಗಳಾದ ತೆಲುಗುದೇಶಂಗೆ ೪ ಹಾಗೂ ಜೆಡಿಯು ಪಕ್ಷಕ್ಕೆ ೨ ಸಚಿವ ಸ್ಥಾನಗಳು ಖಾತ್ರಿಯಾಗಿವೆ. ಆದರೆ ಬಿಜೆಪಿ ಮತ್ತು ಇನ್ನುಳಿದ ಮಿತ್ರ ಪಕ್ಷಗಳಿಂದ ಯರ‍್ಯಾರು ಪ್ರಮಾಣವಚನ ಸ್ವೀಕರಿಸಲಿದ್ದಾರೆಂಬ ಮಾಹಿತಿ ಬಂದಿಲ್ಲ.
ಪ್ರಮಾಣವಚನ ಸಮಾರಂಭದ ಸಿದ್ಧತೆಗಾಗಿ ಜೂನ್ ೫ರಿಂದಲೇ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಸಮಾರಂಭದಲ್ಲಿ ೮೦೦೦ ಮಂದಿ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ವಿವಿಧ ದೇಶಗಳ ನಾಯಕರಿಗೆ ಆಮಂತ್ರಣ ಪತ್ರ ಕಳುಹಿಸಲಾಗಿದ್ದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಕೆಲವರು ಈಗಾಗಲೇ ನವದೆಹಲಿಗೆ ಆಗಮಿಸಿದ್ದಾರೆ. ಭಾನುವಾರ ಇನ್ನುಳಿದ ಗಣ್ಯರು ಬರಲಿದ್ದಾರೆ.
ಯರ‍್ಯಾರಿಗೂ ಸಚಿವ ಸ್ಥಾನ ಸಿಗಬಹುದು?
ಮಹಾರಾಷ್ಟ್ರದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ರಾಜ್ಯದ ಪ್ರಮುಖ ಸಂಸದರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಈಗಾಗಲೇ ಕೇಂದ್ರ ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿಯವರಿಗಲ್ಲದೆ, ಬಿಜೆಪಿ ಸಂಸದ ನಾರಾಯಣ ರಾಣೆಗೂ ಸಚಿವ ಸ್ಥಾನ ಸಿಗುವ ಸಂಭವವಿದೆ. ಪಿಯೂಷ್ ಗೊಯೆಲ್ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಬಿಜೆಪಿಯ ಪ್ರಮುಖ ನಾಯಕರಾದ ರಾಜನಾಥ್ ಸಿಂಗ್‌ಗೆ ಮತ್ತೆ ರಕ್ಷಣಾ ಖಾತೆ ಲಭಿಸಬಹುದು.
ಜೆಡಿಯುಗೆ ೨ ಸ್ಥಾನ: ಮಿತ್ರ ಪಕ್ಷವಾದ ಜೆಡಿಯುವಿಗೆ ಎರಡು ಸಚಿವ ಸ್ಥಾನಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಪಕ್ಷ ಪ್ರಸ್ತಾಪಿಸಿರುವ ಲಲನ್ ಸಿಂಗ್, ರಾಮನಾಥ್ ಠಾಕೂರ್ ಸಂಪುಟಕ್ಕೆ ಸೇರಲಿದ್ದಾರೆ. ಜೆಡಿಯುವಿಗೆ ಮೂರನೇ ಸಚಿವ ಸ್ಥಾನವನ್ನು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನೀಡುವ ಭರವಸೆ ನೀಡಲಾಗಿದೆ.
ಏಕನಾಥ ಶಿಂದೆ ನೇತೃತ್ವದ ಶಿವಸೇನೆಗೆ ಒಂದು ಸಂಪುಟ ದರ್ಜೆ ಹಾಗೂ ಸಹಾಯಕ ಸಚಿವ ಸ್ಥಾನ ನೀಡಲು ಉದ್ದೇಶಿಸಲಾಗಿದೆ. ಅಜಿತ್ ಪವಾರ್‌ರ ಎನ್‌ಸಿಪಿಗೆ ಒಂದು ಸಚಿವ ಸ್ಥಾನ ನೀಡುವ ವಾಗ್ದಾನ ಮಾಡಲಾಗಿದೆ.
ಉತ್ತರಪ್ರದೇಶದಿಂದ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳಕ್ಕೆ ಒಂದು ಸ್ಥಾನ ನೀಡಲು ಉದ್ದೇಶಿಸಲಾಗಿದೆ. ಅಪ್ನಾದಳದ ಅನುಪ್ರಿಯಾ ಪಟೇಲ್ ಹಾಗೂ ಬಿಜೆಪಿ ನಾಯಕ ಜಿತಿನ್ ಪ್ರಸಾದ್ ಅವರಿಗೂ ಸಂಪುಟ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ.
ದಕ್ಷಿಣ ಭಾರತದಿಂದ ತೆಲುಗುದೇಶಂನ ರಾಮಮೋಹನ್ ನಾಯ್ಡು, ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿಗೆ ಸಂಪುಟ ದರ್ಜೆ ಸ್ಥಾನ ಸಿಗುವ ಸಂಭವವಿದೆ. ಬಿಜೆಪಿಯ ಹಿರಿಯ ನಾಯಕ ಕಿಶನ್ ರೆಡ್ಡಿ ಮತ್ತೊಮ್ಮೆ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ.

ಭಾಗವಹಿಸಲಿರುವ ಗಣ್ಯರು
ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಸಿಷೆಚೆಲ್ಸ್ ಅಧ್ಯಕ್ಷ ಅಹಮ್ಮದ್ ಅಫೀಫ್, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜಗನ್ನಾಥ್, ನೇಪಾಳ ಪ್ರಧಾನಿ ಪುಷ್ಪ ಕುಮಾರ್ ದಹಲ್ ಪ್ರಚಂಡ, ಭೂತಾನ್ ಪ್ರಧಾನಿ ತ್ಸೆರಿಂಗ್ ತೊಬ್ಗೆ

Next Article