ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೌನಿ ತಾತನ ಕರಾಮತ್ತು

03:00 AM Jan 30, 2025 IST | Samyukta Karnataka

ಜೀವನದಲ್ಲಿ ಏನಾದರೂ ಮಾಡಬೇಕು. ನನ್ನ ಹೆಸರು ಅಜರಾಮರ ವಾಗಿರಬೇಕು. ಎಲ್ಲರೂ ನನ್ನನ್ನು ಗುರುತು ಹಿಡಿದು ಮಾತಾ ಡಿಸಬೇಕು ಅಂತಹ ಹೆಸರು ಮಾಡದಿದ್ದರೆ ನನ್ನ ಹೆಸರೇ ಅಲ್ಲ ಎಂದು ತಿಗಡೇಸಿ, ಹಾಗಾಗಲು ಏನು ಮಾಡಬೇಕು ಎಂದು ಅಂದಿನಿಂದ ಪ್ಲಾನ್ ಮಾಡತೊಡಗಿದ. ಹೀಗೆ ಮಾಡಿದರೆ ಹೇಗೆ? ಹಾಗೆ ಮಾಡಿದರೆ ಹೇಗೆ ಎಂದು ದಿನಾಲೂ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದ. ಈ ಕುರಿತು ಅನೇಕರ ಕಡೆ ಕಣಿ ಕೇಳಿದ್ದ. ಆದರೆ ಕುಂಡಲಿ ಕುಲತಿಲಕ ಬಿರುದಾಂಕಿತ ಕರಿಲಕ್ಷಂಪತಿ ಹೇಳಿದ್ದು ಮಾತ್ರ ಆತನಿಗೆ ಸರಿ ಅನಿಸಿತ್ತು. ಮರುದಿನದಿಂದ ಆತ ಊರಲ್ಲಿ ಸಾಲ ಎತ್ತತೊಡಗಿದ. ಪರ ಊರುಗಳಲ್ಲಿಯೂ ಸಿಕ್ಕಾಪಟ್ಟೆ ಸಾಲ ಮಾಡಿದ ತಾನು ಮಾಡಿದ ಸಾಲದ ಹಣವನ್ನು ಖರ್ಚು ಮಾಡದೇ ಮನೆಯೊಳಗೆ ಟ್ರಂಕ್‌ನಲ್ಲಿ ಇರಿಸಿದ್ದ. ವಾಯಿದಾ ಮುಗಿದರೂ ಸಾಲ ತೀರಿಸಲಿಲ್ಲ. ಅವರೆಲ್ಲ ಬಂದು ಕೊಟ್ಟ ಸಾಲ ವಾಪಸ್ ಕೇಳತೊಡಗಿದರು. ತಿಗಡೇಸಿಯ ಈ ಸುದ್ದಿ ಎಲ್ಲೆಡೆ ಹರಡಿತ್ತು. ಎಲ್ಲರೂ ತಿಗಡೇಸಿ ಹಾಗಂತೆ.. ಹೀಗಂತೆ ಎಂದು ಮಾತನಾಡಿಕೊಳ್ಳತೊಡಗಿದರು. ಈ ಸುದ್ದಿ ತಿಗಡೇಸಿ ಕಿವಿಗೆ ಬಿದ್ದು ಹಾ… ನನ್ನ ಹೆಸರು ಎಲ್ಲರ ಬಾಯಲ್ಲಿ ನುಲಿಯುತ್ತಿದೆ ಎಂದು ಖುಷಿ ಪಟ್ಟಿದ್ದ. ಸಾಲ ಕೊಟ್ಟವರು ಮನೆವರೆಗೆ ಬಂದು ಬಯ್ಯತೊಡಗಿದರು. ಕೆಲವರು ಕೈ ಮಾಡಲೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಆತನ ತಂದೆ ತಾಯಿ ಬಹಳ ಬೇಸರಿಸಿಕೊಂಡರು. ಸಾಲಗಾರರು ಪೊಲೀಸರಿಗೆ ದೂರು ನೀಡಿದರು. ಯಾವುದೇ ಸಾಕ್ಷ್ಯ ಇಲ್ಲ ಎಂದು ಪೊಲೀಸರು ಮಧ್ಯೆ ಪ್ರವೇಶಿಸಲಿಲ್ಲ. ಆದರೆ ಕೊಟ್ಟವರು ಬಿಡಲಿಲ್ಲ. ಇನ್ನೇನು ನನ್ನ ಏನಾದರೂ ಮಾಡುತ್ತಾರೆ ಎಂದು ಮತ್ತೆ ಕರಿಲಕ್ಷಂಪತಿ ಹತ್ತಿರ ಹೋದ. ಎಲ್ಲವನ್ನೂ ಕೇಳಿಸಿಕೊಂಡ ಆತ ನೀನು ಇಸಿದುಕೊಂಡು ಟ್ರಂಕ್‌ನಲ್ಲಿರಿಸಿದ ಹಣ ಇಲ್ಲಿ ತಂದಿಡು. ಅವರು ಕೇಳಿದರೆ ಏನೂ ಮಾತನಾಡಬೇಡ. ಮೌನಿ ಅಮಾವಾಸ್ಯೆ ನೆಪ ಹೇಳು ಎಂದು ಹೇಳಿದ. ತಿಗಡೇಸಿ ಅದರಂತೇ ಮಾಡಿದ. ಮರುದಿನ ಕರಿಲಕ್ಷಂಪತಿ ಊರಿಂದ ಲಾಪತ ಆದ. ತಿಗಡೇಸಿ ಸಾಲಗಾರರ ಕಾಟ ತಾಳಲಾರದೇ ಪಕ್ಕದ ಊರಿಗೆ ಹೋಗಿ ಹಳ್ಳದ ದಂಡೆಯಲ್ಲಿ ಮೌನ ತಪಸ್ಸು ಮಾಡಲು ಆರಂಭಿಸಿದ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಈಗ ಆತ ಮೌನಿ ತಾತ ಎಂದು ಹೆಸರಾಗಿದ್ದಾನೆ.

Next Article