ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಯತ್ನಾಳ್‌‌‌ ಸ್ವಪ್ರತಿಷ್ಠೆ ಬಿಡಲಿ

01:23 PM Nov 26, 2024 IST | Samyukta Karnataka

ಬೆಂಗಳೂರು: ನಮ್ಮ ಜೊತೆ ಸೇರಿ ಹೋರಾಟ ಮಾಡಿ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ‌ ವಿನಂತಿ ಮಾಡಿದರು ಸಹ, ಸ್ವ ಪ್ರತಿಷ್ಠೆಯಾಗಿ ಇದೆಲ್ಲ ಮಾಡ್ತಿರೋದು ಅವರಿಗೆ ಶೋಭೆ ತರುವಂತಹದ್ದು ಅಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಭಾರತದಾದ್ಯಂತ ಇಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ, ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ವಿಶ್ವದಲ್ಲೇ ಅತಿ ಶ್ರೇಷ್ಠ ಎನಿಸಿಕೊಂಡಿರುವ ಸಂವಿಧಾನವನ್ನು ದೇಶಕ್ಕೆ ನೀಡಿದ ದಿನವಾಗಿದೆ, ರಾಷ್ಟ್ರದ ಉದ್ದಗಲಕ್ಕೆ ಇವತ್ತಿನ ದಿನವನ್ನು ಸಂವಿಧಾನ ದಿನವಾಗಿ ಅಚರಿಸಲಾಗುತ್ತದೆ ಎಂದರು.

ಪ್ರತ್ಯೇಕ ಹೋರಾಟ - ಸ್ವಪ್ರತಿಷ್ಠೆ ಬಿಡಲಿ: ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಮ್ಮ ಜೊತೆ ಸೇರಿ ಹೋರಾಟ ಮಾಡಿ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ‌ ವಿನಂತಿ ಮಾಡಿದರು, ಆದರು ಕೂಡ ಅವರ ಸ್ವ ಪ್ರತಿಷ್ಠೆಯಾಗಿ ಇದೆಲ್ಲ ಮಾಡುತ್ತಿರೋದು ಅವರಿಗೆ ಶೋಭೆ ತರುವಂತದ್ದ ಅಲ್ಲ. ಈಗಲಾದ್ರೂ ಅವರು ಜಾಗೃತರಾಗಿ ಬಂದು ಒಟ್ಟಾಗಿ ಸೇರಿ ಪಕ್ಷವನ್ನ ಬಲಪಡಿಸುವುದಕ್ಕೆ ಸಹಕಾರ ಕೊಡಬೇಕು, ನಮ್ಮ ಕೆಲಸ ನಾವು ಮಾಡುತ್ತೇವೆ, ಉಳಿದಿದ್ದು ಅವರಿಗೆ ಬಿಟ್ಟಿದ್ದು, ಕೇಂದ್ರ ನಾಯಕರಿಗೆ ಬಿಟ್ಟಿದ್ದು, ವರಿಷ್ಠರಿಗೆ ಎಲ್ಲ ಗೊತ್ತಿರುತ್ತೆ ಎಂದರು.

Tags :
#ಬಸನಗೌಡಪಾಟೀಲಯತ್ನಾಳ#ಬಿಜೆಪಿ#ಯಡಿಯೂರಪ್ಪ#ವಕ್ಫ್‌
Next Article