ಯಶ್ ಬರ್ತ್ಡೇಗೆ ಭರ್ಜರಿ ಗಿಫ್ಟ್
11:04 AM Jan 08, 2025 IST
|
Samyukta Karnataka
ಕೆವಿಎನ್ ಪ್ರೊಡಕ್ಷನ್ಸ್ 59 ಸೆಕೆಂಡುಗಳ ಟೀಸರ್ ಬಿಡುಗಡೆ ಮಾಡಿದೆ
ಬೆಂಗಳೂರು: ನಾಯಕ ನಟ ಯಶ್ ಅವರ ಜನುಮದಿನ ಪ್ರಯುಕ್ತ ಇಂದು ಟಾಕ್ಸಿಕ್ (Toxic) ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿದೆ.
ಕೆವಿಎನ್ ಪ್ರೊಡಕ್ಷನ್ಸ್ 59 ಸೆಕೆಂಡುಗಳ ಟೀಸರ್ ಅನ್ನು ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದು. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರ ನಟ ಯಶ್ ಅವರ 19ನೇ ಸಿನಿಮಾವಾಗಿದೆ. 2025ರ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ರಾಕಿಂಗ್ ಸ್ಟಾರ್ ಇಂದು 39 ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿಯ ಬರ್ತಡೆಗೂ ಮುನ್ನ ನಟ ಯಶ್ ತಮ್ಮ ಅಭಿಮಾನಿಗಳಿಗೆ ಮನವಿಯನ್ನು ಮಾಡಿದ್ದು. ಯಾರೂ ಸಹ ನನ್ನ ಮನಸ್ಸಿಗೆ ನೋವುಂಟು ಮಾಡುವಂತೆ ಮಾಡಬೇಡಿ ಅಂತ ಹೇಳಿದ್ದರು. ಕಳೆದ ಬಾರಿ ದುರಂತ ನಡೆದ ಹಿನ್ನಲೆಯಲ್ಲಿ ಯಶ್ ಅವರು ಈ ರೀತಿಯ ಮನವಿ ಮಾಡಿದ್ದರು.
Next Article