For the best experience, open
https://m.samyuktakarnataka.in
on your mobile browser.

ಪಿಎಸ್​ಐ ಸಾವು: ಕುಟುಂಬಸ್ಥರಿಂದ ಗಂಭೀರ ಆರೋಪ

11:08 AM Aug 03, 2024 IST | Samyukta Karnataka
ಪಿಎಸ್​ಐ ಸಾವು  ಕುಟುಂಬಸ್ಥರಿಂದ ಗಂಭೀರ ಆರೋಪ

ಯಾದಗಿರಿ: ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನ ಕುರಿತಂತೆ ಸಾವಿಗೆ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ಮತ್ತು ಪುತ್ರ ಸನ್ನಿಗೌಡ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಪತ್ನಿ ಶ್ವೇತಾ ಮಾಧ್ಯಮ ಮುಂದೆ ಪ್ರತಿಕ್ರಿಯಿಸಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಮಗನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಶಾಸಕ ಚೆನ್ನಾರೆಡ್ಡಿ ಪಾಟೀಲ್ 30/ 40 ಲಕ್ಷ ಹಣ ಕೇಳಿದ್ದಾರೆ. ಸಾಕಷ್ಟು ಭಾರೀ ಹಣ ಕೇಳ್ತಿರುವ ಬಗ್ಗೆ ‌ನನಗೆ ಹೇಳಿದ್ದಾರೆ. ಎಂಎಲ್ಎ ಹಾಗೂ ಎಂಎಲ್ಎ ಮಗ ಹಣ ಕೇಳಿದ್ದಾರೆ. ಅವರ ಇಬ್ಬರನ್ನೂ ಕರೆಸಿ ಅವರು ಅರೆಸ್ಟ್ ಮಾಡಬೇಕು ಎಂದು ಹೇಳಿದ್ದಾರೆ. ಜಾತಿ, ಹಣಕ್ಕಾಗಿ ನನ್ನ ಗಂಡನ ಜೀವ ಹೋಯ್ತು. ನೀವೆಲ್ಲ ಒಬ್ಬ ದಕ್ಷ ಅಧಿಕಾರಿಯನ್ನ ಕಳೆದುಕೊಂಡಿದ್ದೀರಿ. ಎಸ್ಪಿ ಮೇಡಂ ನಮಗೆ ಎಫ್ಐಆರ್ ಕೊಡ್ತಿನಿ ಬನ್ನಿ ಅಂದ್ರು. ಅವರನ್ನ ನಂಬ್ಕೊಂಡು ಖಾಸಗಿ ಆಸ್ಪತ್ರೆಯಿಂದ ಇಲ್ಲಿಗೆ ಬಂದಿದ್ದೀವಿ. ನನ್ನ ಮಕ್ಕಳಿಗೆ ನಾನು ಏನಂತ ಹೇಳಬೇಕು. ಪೊಲೀಸ್ ಇಲಾಖೆಯಲ್ಲಿ ‌ಮಾನವೀಯತೆ ಇಲ್ಲ. ಎಂಟು ತಿಂಗಳ ಗರ್ಭಿಣಿ ಇದ್ದೀನಿ ರಸ್ತೆಯಲ್ಲಿ ಕುರಿಸಿದ್ದಾರೆ. ಪೋಲಿಸ್ ಅಧಿಕಾರಿಗೆ ನ್ಯಾಯ ಸಿಗ್ತಿಲ್ಲ. ಇನ್ನೂ ಸಾರ್ವಜನಿಕರಿಗೆ ಎಲ್ಲಿ ನ್ಯಾಯ ಸಿಗುತ್ತೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್‌ಐ ಆಗಿ ಪರಶುರಾಮ್ (35) ಅಧಿಕಾರ ಸ್ವೀಕರಿಸಿದ್ದರು. ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಕಾರಣ ಗುರುವಾರ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದ ಅವರು. ಶುಕ್ರವಾರ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದರು.

Tags :