For the best experience, open
https://m.samyuktakarnataka.in
on your mobile browser.

ಯಾವ ಜನುಮದ ಗೆಳತಿ ಎಂದು ಕೇಳಿ ಟ್ರೆಂಡ್‌ ಸೃಷ್ಟಿಸಿದ ಕಾಟೇರಾ

04:00 PM Dec 11, 2023 IST | Samyukta Karnataka
ಯಾವ ಜನುಮದ ಗೆಳತಿ ಎಂದು ಕೇಳಿ ಟ್ರೆಂಡ್‌ ಸೃಷ್ಟಿಸಿದ ಕಾಟೇರಾ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ “ಕಾಟೇರಾ” ಸಿನಿಮಾ ಡಿಸೆಂಬರ್‌ 29ರಂದು ತೆರೆಗೆ ಅಪ್ಪಳಿಸಲಿದ್ದು, ಇಂದು ಈ ಚಿತ್ರದ ಮತ್ತೊಂದು ʻಯಾವ ಜನ್ಮದ ಗೆಳತಿʼ ಎಂಬ ಹಾಡು ಆನಂದ್‌ ಆಡಿಯೋ ಅವರ ಯೂ ಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ಸಂಗೀತ ಸಂಯೋಜಕ ವಿ. ಹರಿಕೃಷ್ಟ ನಿರ್ದೇಶನ ಮಾಡಿದ್ದು, ಗಾಯಕ ಹೇಮಂತ್‌ ಕುಮಾರ್‌ ಹಾಗೂ ಗಾಯಕಿ ರಕ್ಷಿತ ಸುರೇಶ್‌ ಧ್ವನಿಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಹಾಡಿಗೆ ಡಾ.ವಿ.ನಾಗೇಂದ್ರ ಪ್ರಸಾದ ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ಬಿಡುಗಡೆಯಾದ 3 ಗಂಟೆಯಲ್ಲಿ 4 ಲಕ್ಷಕ್ಕೂ ಅಧಿಕ ಜನ ವಿಕ್ಷಿಸಿದ್ದಾರೆ, ಈ ಗೀತೆ ಟ್ರೆಂಡಿಂಗ್ 4 ರಲ್ಲಿ ಇದ್ದು, ಈ ಹಾಡನ್ನು ನಿವೊಮ್ಮೆ ನೋಡಿ "ಯಾವ ಜನ್ಮದ ಗೆಳತಿ" ಎಂದು ತಿಳಿಯಿರಿ…