ಯುವತಿಯನ್ನ ವಿವಸ್ತ್ರಗೊಳಿಸಿ ಹಲ್ಲೆ
ವಿಜಯಪುರ : ಸಾರ್ವಜನಿಕರ ಎದುರಲ್ಲೇ ಮಂಗಳಮುಖಿ ರೂಪದ ಯುವತಿಯನ್ನು ಬೆತ್ತಲೆಗೊಳಿಸಿ ಮಂಗಳಮುಖಿಯರೇ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಅಮಾನವೀಯ ಘಟನೆ ಎರಡು ವಾರಗಳ ಹಿಂದೆಯೇ ನಡೆದಿದೆ ಎನ್ನಲಾಗಿದೆ. ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಯುವತಿಯನ್ನಯ ಓಡಿಸಿಕೊಂಡು ಬಂದು ಯುವತಿಯನ್ನು ಹಿಡಿದು ಮಂಗಳಮುಖಿಯರು ಮನಬಂದಂತೆ ಥಳಿಸಿದ್ದಾರೆ. ಸಾರ್ವಜನಿಕರ ಎದುರಲ್ಲೇ ಏಳೆಂಟು ಮಂಗಳಮುಖಿಯರು ಅಮಾನವೀಯ ಕೃತ್ಯ ಎಸಗಿದ್ದು, ಯುವತಿಯ ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿರುವುದು ಮಾತ್ರವಲ್ಲದೇ ಮರ್ಮಾಂಗಕ್ಕೆ ಒದ್ದು, ಕಾರದಪುಡಿ ಹಾಕಿ ಹಲ್ಲೆ ಮಾಡಿದ್ದಾರೆ. ಇನ್ನು ಥಳಿತಕ್ಕೊಳಗಾದುದ್ದು ಯುವತಿ ಮಂಗಳಮುಖಿಯಲ್ಲ. ಆದರೂ ಮಂಗಳಮುಖಿಯರ ರೀತಿಯಲ್ಲಿ ವರ್ತಿಸಿ ನಗರದಲ್ಲಿ ಹಣ ಎತ್ತುವಳಿ ನಡೆಸಿದ್ದಾಳೆ ಎಂಬುದು ಹಲ್ಲೆ ನಡೆಸಿರುವ ಮಂಗಳಮುಖಿಯರ ವಾದ. ಆದರೆ ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಕೃತ್ಯವನ್ನು ಹಲವಾರು ಜನರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ, ಅಲ್ಲದೆ ಕೆಲ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ,