ಯೋಧ ಮತದಾರರಾಗಿ ಹಕ್ಕು ಚಲಾಯಿಸಿ
01:20 PM Apr 26, 2024 IST
|
Samyukta Karnataka
ನವದೆಹಲಿ: ಪ್ರಜಾಪ್ರಭುತ್ವದ ರಕ್ಷಣೆಗಾಗಿ ಯೋಧ ಮತದಾರರಾಗಿ ಹಕ್ಕು ಚಲಾಯಿಸಿ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ ಆರಂಭವಾಗಿದ್ದು, ರಾಹುಲ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
"ಇಂದು ದೇಶದ ಭವಿಷ್ಯವನ್ನು ನಿರ್ಧರಿಸಲಿರುವ ಈ ಐತಿಹಾಸಿಕ ಚುನಾವಣೆಯ ಎರಡನೇ ಹಂತದ ಮತದಾನವಾಗಿದೆ. ಮುಂದಿನ ಸರ್ಕಾರವು 'ಕೆಲವು ಬಿಲಿಯನೇರ್ಗಳದ್ದು' ಅಥವಾ '140 ಕೋಟಿ ಭಾರತೀಯರದ್ದು' ಎಂಬುದನ್ನು ನಿಮ್ಮ ಮತ ನಿರ್ಧರಿಸುತ್ತದೆ. ಆದುದರಿಂದ ಇಂದೇ ಮನೆಯಿಂದ ಹೊರಬಂದು ‘ಸಂವಿಧಾನದ ಸಿಪಾಯಿ’ಯಾಗುವ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ." ಎಂದು ಅವರು ಬರೆದುಕೊಂಡಿದ್ದಾರೆ.
Next Article