ರಸ್ತೆ ಅಪಘಾತದಲ್ಲಿ ಬೆಳಗಾವಿ ಯೋಧ ಸಾವು
06:13 PM Jan 09, 2025 IST | Samyukta Karnataka
ಬೆಳಗಾವಿ: ನಾಗಾಲ್ಯಾಂಡ್‌ನ ಅಸ್ಸಾಂ ರೈಫಲ್ಸ್‌ನ ೪೧ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ತಾಲ್ಲೂಕಿನ ನಿಂಗೆನಟ್ಟಿ ಗ್ರಾಮದ ಸೈನಿಕ ಮಂಗಳವಾರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.
ಸೈನಿಕ ರವಿ ತಳವಾರ ಬೆಳಗಾವಿ ತಾಲೂಕಿನ ನಿಂಗೆನಟ್ಟಿ ಗ್ರಾಮದ ನಿವಾಸಿ. ಅವರ ಕುಟುಂಬ ಸದಸ್ಯರ ಪ್ರಕಾರ, ರವಿ ತಳವಾರ ಪ್ರಯಾಣಿಸುತ್ತಿದ್ದ ವಾಹನವು ನಾಗಾಲ್ಯಾಂಡ್‌ನ ಘಾಟ್ ವಿಭಾಗದಲ್ಲಿ ಆಳವಾದ ಕಂದಕಕ್ಕೆ ಬಿದ್ದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಬೆಳಗ್ಗೆ ರಕ್ಷಣಾ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ. ೧೬ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ರವಿ, ಎರಡು ವರ್ಷಗಳಲ್ಲಿ ನಿವೃತ್ತರಾಗುವ ನಿರೀಕ್ಷೆಯಿತ್ತು. ಮೃತ ಸೈನಿಕನಿಗೆ ಪತ್ನಿ ಶೀತಲ್ ತಳವಾರ, ೧೧ ವರ್ಷದ ಮಗಳು ಮತ್ತು ೧೦ ವರ್ಷದ ಮಗ ಇದ್ದಾರೆ. ರವಿ ಅವರ ಮೃತದೇಹ ಎರಡು ದಿನಗಳಲ್ಲಿ ಮನೆಗೆ ತಲುಪುವ ನಿರೀಕ್ಷೆಯಿದೆ.