ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜಕೀಯ ಪಕ್ಷಗಳಿಗೆ ನೈಜತೆಯೇ ಮುಖ್ಯ

02:36 AM Sep 16, 2024 IST | Samyukta Karnataka

ಸೀತಾರಾಮ್ ಯೆಚೂರಿ ಇನ್ನಿಲ್ಲ. ಕಮ್ಯುನಿಸ್ಟ್ ನಾಯಕತ್ವದ ಕೊನೆಯ ಕೊಂಡಿ ಕಳಚಿತು ಎಂದು ಪತ್ರಿಕೆಗಳು ವರದಿ ಮಾಡಿದವು, ಆದರೆ ನನಗನಿಸಿದ್ದು ಕಮ್ಯುನಿಸ್ಟ್ ಪಕ್ಷಗಳನ್ನು ಹಿಡಿದಿಟ್ಟುಕೊಂಡಿದ್ದ ಕಮ್ಯುನಿಸ್ಟ್ ಪಕ್ಷಗಳೇ ಜೋಡಣೆಗಳಿಗೆ ತೆರೆದುಕೊಳ್ಳದೆ ಅದೇ ಎರವಲು ಸಿದ್ಧಾಂತಗಳಿಗೆ ಜೋತು ಬಿದ್ದ ಕೊನೆಯ ಕೊಂಡಿಯಂತಾಗಿವೆ. ಕೇರಳದಲ್ಲಿ ಒಂದಿಷ್ಟು ಪ್ರಭಾವವನ್ನು ಉಳಿಸಿಕೊಂಡ ಕಮ್ಯುನಿಸ್ಟ್ ಪಕ್ಷ ಬೇರೆಲ್ಲ ರಾಜ್ಯಗಳಲ್ಲೂ ಇನ್ನು ನೆನಪು ಮಾತ್ರ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವೊಂದು ಕಾರ್ಖಾನೆಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳೊಂದಿಗೆ ಕೆಲ ಮಜ್ದೂರ್ ಸಂಘಗಳ ಅಲ್ಲೊಂದು ಇಲ್ಲೊಂದು ಬಾವುಟಗಳು ಹಾರಾಡುವುದು ಬಿಟ್ಟರೆ ಅವು ಒಂದು ಶಕ್ತಿಯಾಗಿ ರಾಜಕೀಯ ಪಲ್ಲಟನವನ್ನು ಕಳೆದುಕೊಂಡು ಅದೆಷ್ಟೋ ದಶಕಗಳಾಗಿವೆ. ಯಾವ ಪಕ್ಷ ತನ್ನ ಹೋರಾಟಗಳಲ್ಲಿ ಯಾವ ದನಿಯನ್ನು ಬಳಸಿಕೊಳ್ಳುತ್ತದೆ ಅಥವಾ ಯಾವ ಕೂಗಿಗೆ ದನಿಯಾಗಿದೆ ಎಂದು ಪ್ರಜೆಗಳು ಗಮನಿಸುತ್ತಲೇ ಇರುತ್ತಾರೆ. ಯಾವುದೇ ಪಕ್ಷಕ್ಕೆ ತತ್‌ಕ್ಷಣಕ್ಕೆ ಮತದಾರ ಅಧಿಕಾರ ತಂದುಕೊಡಲಾರ. ಆದರೆ, ಆ ಪಕ್ಷದ ಹವಾಭಾವ, ತೆಗೆದುಕೊಂಡ ನಿಲುವುಗಳು ಎಲ್ಲವನ್ನು ಗಮನಿಸುತ್ತಲೇ ಇರುತ್ತಾನೆ. ಕಾಲ ಪಕ್ವವಾದಾಗ ಯಾರ ಮುಲಾಜಿಲ್ಲದೆ ಊಹಿಸಲಾಗದ ಫಲಿತಾಂಶ ಪ್ರಜಾಪ್ರಭುತ್ವ ತಂದು ಕೊಡುತ್ತದೆ. ಅದರ ಪರಿಣಾಮವಾಗಿಯೇ ಇಂದು ಬಿಜೆಪಿ ಸತತ ಮೂರನೇ ಬಾರಿ ಕೇಂದ್ರದಲ್ಲಿ ಸರಕಾರ ನಡೆಸುವಂತಾಗಿದೆ. ೪೦೦ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಬಂದು ಕುಳಿತಿದೆ. ೧೯೬೯ರಲ್ಲಿ ಇಂದಿರಾ ಗಾಂಧಿ ಸರ್ಕಾರವನ್ನು ಕುಸಿಯುವುದರಿಂದ ಬದುಕುಳಿಸಿದ್ದ ಕಮ್ಯುನಿಸ್ಟ್ ಪಕ್ಷ ಇಂದು ಹೇಳ ಹೆಸರಿಲ್ಲದಂತೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.
ಇಂದಿನ ಪೀಳಿಗೆ ಬಹುಶಃ ಕಮ್ಯುನಿಸ್ಟ್ ಅಂದರೆ ಒಂದೇ ಪಕ್ಷವೆಂದೇ ಭಾವಿಸಿರುವವರೇ ಹೆಚ್ಚು. ಆದರೆ ಹಾಗಲ್ಲ. ಸಿಪಿಐ, ಸಿಪಿಐ(ಎಂ), ಸಿಪಿಐ ಎಂಲ್ ಇದೆಲ್ಲ ಬೇರೆ ಬೇರೆ ಪಕ್ಷಗಳು. ಆದರೆ ಕಮ್ಯುನಿಸ್ಟ್ ಸಿದ್ಧಾಂತಗಳಲ್ಲೇ ಕೆಲವು ಭಿನ್ನ ಭಿನ್ನ ಅಭಿಪ್ರಾಯಗಳನ್ನು ಒಳಗೊಂಡ ಕಾರಣಕ್ಕೆ ಬೇರೆ ಬೇರೆ ಕವಲೊಡೆದ ಪಕ್ಷಗಳಾಗಿ ರೂಪಗೊಂಡವು. ಇಂತಹ ೭೦ ಕವಲೊಡೆದ ಪಕ್ಷಗಳಿವೆ ಎಂಬ ಅಂದಾಜಿದೆ. ಆದರೆ ಇವು ಚುನಾವಣೆಗಳ ಸಂದರ್ಭದಲ್ಲಿ ಒಂದೇ ಮೈತ್ರಿಯಡಿ ಸ್ಪರ್ಧೆ ಮಾಡುತ್ತವೆ. ಅದೇನೇ ಇರಲಿ ಭಾರತೀಯ ಮತದಾರ ಕಮ್ಯುನಿಸ್ಟ್ ಪಕ್ಷಗಳಿಗೆ ಈಗಾಗಲೇ ಎಲ್ಲ ರಾಜ್ಯಗಳಿಂದ ಗೇಟ್ ಪಾಸ್ ಕೊಟ್ಟು ಕಳಿಸಿದ್ದಾನೆ. ಯಾವುದೇ ಪಕ್ಷಗಳಿರಲಿ ತಮ್ಮ ದೇಶದ ಮೇಲೆ ಶತ್ರು ರಾಷ್ಟç ಆಕ್ರಮಣ ಮಾಡಿದಾಗ ತಮ್ಮ ತಾಯ್ನಾಡಿಗೆ ಕಟಿಬದ್ಧರಾಗಿ ನಿಲ್ಲುವುದು ಆಯಾ ಪಕ್ಷಗಳ ಆದ್ಯ ಕರ್ತವ್ಯ.
ಆದರೆ ೧೯೬೨ ಭಾರತ ಚೀನಾ ಯುದ್ಧದಲ್ಲಿ ಕೆಲವು ಭಾರತೀಯ ಕಮ್ಯುನಿಸ್ಟರು ಚೀನಾದ ಟಿಬೆಟ್‌ನ ಮೇಲಿನ ಆಕ್ರಮಣ ಸರಿ ಎಂಬುದಾಗಿತ್ತು. ಅಲ್ಲದೆ ಅಮೆರಿಕಾದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ ೧೯೬೨ರ ಭಾರತ ಹಾಗೂ ಚೀನಾ ಯುದ್ಧಗಳ ಹಿನ್ನೆಲೆಯಲ್ಲಿ ಭಾರತೀಯ ಕಮ್ಯುನಿಸ್ಟ್ಗಳ ಪಾತ್ರ ಮತ್ತು ೧೯೬೨ರ ಯುದ್ಧ ಎಂಬ ಸಂಗ್ರಹಿಸಿದ ವರದಿಯ ಪ್ರಕಾರ ಹಲವು ಅಂಶಗಳನ್ನು ಸಾದರ ಪಡಿಸಿದ್ದವು.
ಕೇರಳದ ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಲಾದಮುಲ್ಲಪೆರಿಯಾರ್ ಅಣೆಕಟ್ಟಿನ ವಿಷಯದಲ್ಲಿ ತಮಿಳನಾಡು ಕೇರಳದೊಂದಿಗೆ ಕಾನೂನು ಸಮರಕ್ಕಿಳಿದಿದೆ. ಕೇರಳದಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಪ್ರಬಲವಾಗಿ ಒಂದಕ್ಕೊಂದು ಪೈಪೋಟಿ ನೀಡುವ ಪಕ್ಷಗಳು, ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದಾಗ ತಮಿಳುನಾಡಿನ ಕಮ್ಯುನಿಸ್ಟ್ ಪಾರ್ಟಿ ತಕರಾರು ತೆಗೆಯುತ್ತದೆ. ಅದೇ ರೀತಿ ಕಮ್ಯುನಿಸ್ಟ್ ಪಾರ್ಟಿ ಕೇರಳದಲ್ಲಿ ಅಧಿಕಾರಕ್ಕೆ ಬಂದಾಗ ತಮಿಳ್ನಾಡಿನ ಕಮ್ಯುನಿಸ್ಟ್ ಪಾರ್ಟಿ ತನಗೆ ವಿಷಯದ ಬಗ್ಗೆ ಸಂಬಂಧವೇ ಇಲ್ಲವೇನೋ ಎಂಬುವಂತೆ ಸುಮ್ಮನಿರುತ್ತದೆ.
ಕಮ್ಯುನಿಸ್ಟ್ ಸಿದ್ಧಾಂತದಿಂದ ಪ್ರಭಾವಿತರಾದ ಜೆಎನ್‌ಯು ವಿದ್ಯಾರ್ಥಿಗಳ ಗುಂಪು ಕ್ಯಾಂಪಸ್‌ನಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದಾಗ ಇಡೀ ದೇಶವೇ ಅದನ್ನು ವಿರೋಧಿಸಿತ್ತು. ಸರ್ಕಾರ ಆ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಂಡಾಗ ಕಮ್ಯುನಿಸ್ಟ್ ಪಕ್ಷ ಮಾತ್ರ ಇದು ವಾಕ್ ಸ್ವಾತಂತ್ರ‍್ಯದ ದಮನ ಮಾಡಿದಂತೆ ಎಂದು ಹೇಳಿಕೆಗಳನ್ನು ಕೊಟ್ಟಿತ್ತು. ಇನ್ನು ಕಾಶ್ಮೀರದ ವಿಷಯಕ್ಕೆ ಬಂದಾಗ ಸೈನ್ಯವನ್ನು ಎಂದಿಗೂ ಟೀಕಿಸುವ ಕಮ್ಯುನಿಸ್ಟ್ ನಾಯಕರು ಚೀನಾ ಟಿಬೆಟ್‌ನಲ್ಲಿ ಮಾಡಿದ ಮಾರಣ ಹೋಮಗಳ ಬಗ್ಗೆ ಮಾತನಾಡುವುದಿಲ್ಲ. ಚೀನಾ ಆಕ್ರಮಣದಲ್ಲಿರುವ ಆಕ್ಸೆ ಚೀನಾದ ಬಗ್ಗೆ ಸೊಲ್ಲೆತ್ತುವುದಿಲ್ಲ. ಹೀಗೆ ಇಂತಹುದೇ ಎಂದು ಈ ರೀತಿಯ ಇನ್ನಷ್ಟು ಹತ್ತಾರು ಪ್ರಸಂಗಗಳನ್ನು ಪಟ್ಟಿ ಮಾಡಬಹುದು ಹೀಗೆ ಕಮ್ಯುನಿಸ್ಟ್ ಪಕ್ಷಗಳು ತಾವು ತಳೆದ ರಾಷ್ಟ್ರವಿರೋಧಿ ನಿಲುವುಗಳಿಂದ ಜನರಿಂದ ದೂರವಾಗುತ್ತಾ ಹೋಯಿತು, ಬೆಂಗಾಲದಲ್ಲಿ ಕಮ್ಯುನಿಸ್ಟ್ ಪಕ್ಷ ಹೆಮ್ಮರವಾಗಿ ಬೆಳೆದು ನಿಂತದ್ದು ನಿಜ. ಆದರೆ ಹಾಗೆ ಆಗಲು ಕಾರಣ ಇಲ್ಲದಿಲ್ಲ, ಈಸ್ಟ್ ಪಾಕಿಸ್ತಾನ ಅಂದರೆ ಈಗಿನ ಬಾಂಗ್ಲಾ ವಲಸಿಗರು ಹಾಗು ಸ್ವಲ್ಪ ಪ್ರಮಾಣದಲ್ಲಿ ಪಶ್ಚಿಮ ಬಂಗಾಳ ಪ್ರತಿ ಹಳ್ಳಿಯ ಆಳಕ್ಕೆ ಕಮ್ಯುನಿಸ್ಟ್ ಪಕ್ಷದ ಕಚೇರಿಗಳು ತಲುಪಿದ್ದು ಮತ್ತೊಂದು ಕಾರಣವೂ ಹೌದು. ಆದರೆ ಕಮ್ಯುನಿಸ್ಟ್ ಆಡಳಿತದಲ್ಲಿ ೩೦ಕ್ಕೂ ಹೆಚ್ಚು ವರುಷ ಪಶ್ಚಿಮ ಬಂಗಾಳದಲ್ಲಿ ಏನೇನು ನಡೆಯಿತೆಂದು ಹೇಳುವ ಅಗತ್ಯ ಇಲ್ಲವೇ ಇಲ್ಲ ಅಲ್ಲೀಗ ಏನಿದ್ದರೂ ಬಾಣಲೆಯಿಂದ ಬೆಂಕಿಗೆ ಎಂಬ ಪರಿಸ್ಥಿತಿ ಉಂಟಾಗಿರುವುದು ಕೂಡ ಅಷ್ಟೇ ಸತ್ಯ..
ಹೀಗೆ ಯಾವ ಪಕ್ಷಗಳು ದೇಶದ ಹಿತವನ್ನು ಮರೆತು, ಜನಸಾಮಾನ್ಯರ ಭಾವನೆಗಳಿಗೆ ಬೆಲೆಯನ್ನು ಕೊಡದೆ ತಾನು ನಡೆದಿದ್ದೇ ದಾರಿ ಎಂದು ಮುಂದೆ ಸಾಗಿವೆಯೋ ಅವೆಲ್ಲವೂ ಭಾರತದ ರಾಜಕೀಯ ನಕ್ಷೆಯಿಂದ ಶಾಶ್ವತವಾಗಿ ತನ್ನ ಸ್ಥಾನವನ್ನು ಕಳೆದುಕೊಂಡಿವೆ, ಈ ಸತ್ಯ ದರ್ಶನ ಇಂದಿನ ಪರಿಸ್ಥಿತಿಯಲ್ಲಿ ಎಲ್ಲ ಪಕ್ಷಗಳಿಗೆ ಅರ್ಥವಾಗಬೇಕು, ಕಮ್ಯುನಿಸ್ಟರು ಪಟ್ಟ ಪರಿಪಾಟಲನ್ನು ಕಾಂಗ್ರೆಸ್ ಪಡಬಾರದೆಂದರೆ ರಾಷ್ಟ್ರೀಯತೆಯ ವಿಷಯ ಬಂದಾಗ ಹೇಗಿರಬೇಕು, ಯಾವ ನಿಲುವನ್ನು ತಾಳಬೇಕು ಇದೆಲ್ಲವನ್ನು ಅರಿತುಕೊಳ್ಳಬೇಕು ಇಲ್ಲದಿದ್ದರೆ ನಷ್ಟ ಜನಸಾಮಾನ್ಯರಿಗಲ್ಲ ಕಾಂಗ್ರೆಸ್ ಪಕ್ಷಕ್ಕೆ, ಕಾಂಗ್ರೆಸ್ ಪಕ್ಷದ ಜಾಗದಲ್ಲಿ ಇಂದಲ್ಲ ನಾಳೆ ಮತ್ತೊಂದು ಬಿಜೆಪಿಯಷ್ಟೇ ಪ್ರಬಲವಾದ ಪಕ್ಷ ಬಂದು ಕುಳಿತು ಕೊಳ್ಳಬಹುದು.

Next Article