ರಾಜಕೀಯ ಷಡ್ಯಂತ್ರ: ಜಮೀರ್ ಅಹ್ಮದ್
ಬಳ್ಳಾರಿ: ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಬಿಜೆಪಿ ಷಡ್ಯಂತ್ರದಿಂದ ಎಂದ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಅವರು ಇಂದು ಬಳ್ಳಾರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ ರಾಜ್ಯಪಾಲರ ಮೇಲೆ ರಾಜಕೀಯ ಒತ್ತಡವಿದೆ ಹೀಗಾಗಿ ಪ್ರಾಸಿಕ್ಯೂಷನ್ ಜಾರಿ ಮಾಡಿದ್ದಾರೆ, ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ ಆದರೂ ಇದೊಂದು ರಾಜಕೀಯ ಷಡ್ಯಂತ್ರ, ಇದೇ ವಿಚಾರ ಇಟ್ಟುಕೊಂಡು ಸಿಎಂ ರಾಜೀನಾಮೆ ಕೊಡುವ ಅಗತ್ಯವು ಇಲ್ಲ ಮತ್ತು ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಇಲ್ಲ. ಬಿಜೆಪಿ ಅವರು ಪಾದಯಾತ್ರೆ ಮಾಡಿದ್ರು ಏನು ಪ್ರಯೋಜನ ಆಗಿಲ್ಲ ಅಂತಾ ಆಗಬಾರದು ಅನ್ನುವ ಕಾರಣಕ್ಕೆ ಪ್ರಾಸಿಕ್ಯೂಸೆನ್ ಜಾರಿ ಮಾಡಿದ್ದಾರೆ. ಬಸವರಾಜ ಬೊಮ್ಮಾಯ್ಯಿ ಇದ್ದಾಗ ಸೈಟ್ ಕೊಟ್ಟಿದ್ದು, ಬಿಜೆಪಿ ಅವರು ಮಾಡಿದ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಸಂಜೆ ಐದು ಗಂಟೆಗೆ ಕ್ಯಾಬಿನೆಟ್ ಮಿಟಿಂಗ್ ಕರೆದಿದ್ದಾರೆ. ಸಿಎಂ ಆಫೀಸ್‌ನಿಂದ ಪೋನ್ ಕರೆ ಬಂದಿದೆ. ನಾನು ಕ್ಯಾಬಿನೆಟ್ ಮಿಟಿಂಗ್‌ಗೆ ಹೋಗುತ್ತೆನೆ ಎಂದರು.