ರಾಜಮಾತೆಯನ್ನು ಕಣಕ್ಕಿಳಿಸಿದ ಬಿಜೆಪಿ
10:59 PM Mar 25, 2024 IST | Samyukta Karnataka
ನವದೆಹಲಿ: ಬಿಜೆಪಿ ಬಿಡುಗಡೆ ಮಾಡಿದ ೫ನೇ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಲ್ಲಿ ರಾಜಮಾತಾ ಅಮೃತಾ ರಾಯ್ ಅವರಿಗೆ ಸೀಟು ಸಿಕ್ಕಿದೆ. ಇಲ್ಲಿ ಟಿಎಂಸಿಯಿಂದ ಕಳೆದ ಬಾರಿ ಮಹುವಾ ಮೊಯಿತ್ರಾ ಶೇಕಡ ೪೫ರಷ್ಟು ಮತ ಪಡೆದು ಗೆಲುವು ಸಾಧಿಸಿದ್ದು, ಈ ಬಾರಿಯೂ ಪಕ್ಷ ಅವರಿಗೇ ಟಿಕೆಟ್ ನೀಡಿದೆ. ಕೃಷ್ಣ ನಗರ ಕ್ಷೇತ್ರವನ್ನು ಮೊದಲಿನಿಂದ ಸಿಪಿಎಂ ಗೆಲ್ಲುತ್ತಾ ಬಂದಿದ್ದು, ೨೦೦೯ರಲ್ಲಿ ಟಿಎಂಸಿ ವಶಪಡಿಸಿಕೊಂಡಿತ್ತು. ಕಳೆದ ಬಾರಿ ಗೆದ್ದಿದ್ದ ಮೊಯಿತ್ರಾ ಮೋದಿ ವಿರುದ್ಧ ಗಂಭೀರ ಟೀಕೆಗಳನ್ನು ಮಾಡುತ್ತಿದ್ದರು. ಈ ಬಾರಿ ಅವರನ್ನು ಸೋಲಿಸುವ ಸವಾಲನ್ನು ಬಿಜೆಪಿ ತೆಗೆದುಕೊಂಡಿದೆ. ಹೀಗಾಗಿ ಹೆವಿ ವೆಯ್ಟ್ ಸ್ಪರ್ಧಾಳುವನ್ನು ಘೋಷಿಸಿದ್ದಾರೆ.