ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜ್ಯಕ್ಕೆ ಹೆಮ್ಮೆ ತಂದ ಕನ್ನಡತಿ ಚೈತ್ರಾ

09:03 AM Jan 20, 2025 IST | Samyukta Karnataka

ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಕರ್ನಾಟಕದ ಆಟಗಾರ್ತಿ ಚೈತ್ರಾ

ಬೆಂಗಳೂರು: ಭಾರತದ ಮಹಿಳಾ ಖೋ ಖೋ ತಂಡ ನೇಪಾಳವನ್ನು 78-40 ಅಂಕಗಳಿಂದ ಸೋಲಿಸಿ  2025ರ ವಿಶ್ವ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಭಾರತದ ಮಹಿಳಾ ಮತ್ತು ಪುರುಷರ ಖೊ-ಖೊ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಅಭಿನಂದನೆ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮೊಟ್ಟಮೊದಲ ಖೊ - ಖೊ ವಿಶ್ವಕಪ್ ಪಂದ್ಯಾಕೂಟದಲ್ಲಿ ನೇಪಾಳವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಮಹಿಳಾ ಮತ್ತು ಪುರುಷರ ಖೊ-ಖೊ ತಂಡಕ್ಕೆ ಅಭಿನಂದನೆಗಳು.
ಚೊಚ್ಚಲ ಖೊ-ಖೊ ವಿಶ್ವಕಪ್‌ನಲ್ಲಿ ಭಾರತೀಯ ತಂಡಗಳ ಈ ಅಮೋಘ ಸಾಧನೆ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ.

ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುರುಬೂರಿನ ಯುವತಿ ಚೈತ್ರ. ಬಿ ಅವರು ವಿಶ್ವವಿಜೇತ ಮಹಿಳಾ ಖೊ-ಖೊ ತಂಡದ ಭಾಗವಾಗಿರುವುದು ನಾಡಿಗೆ ಹೆಮ್ಮೆಯ ಸಂಗತಿ.
ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದಿದ್ದಾರೆ.

ಕನ್ನಡತಿ ಚೈತ್ರಾ: ಮಹಿಳೆಯರ ಖೋ ಖೋ ತಂಡದಲ್ಲಿರುವ ಒಟ್ಟು 15 ಜನ ಸದಸ್ಯರಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು ಕರ್ನಾಟಕದ ಆಟಗಾರ್ತಿ ಚೈತ್ರಾ.   ಮೈಸೂರಿನ ತಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ರೈತನ ಮಗಳು.

Tags :
#khokho#KhoKhoWorldCup#khokhoworldcup2025#ಕನ್ನಡ#ಕನ್ನಡತಿ#ಕ್ರೀಡೆ#ಚಿಕ್ಕಮಗಳೂರು#ಚೈತ್ರಾ#ಪದಕ#ಸಿದ್ದರಾಮಯ್ಯ
Next Article