ರಾಜ್ಯದಲ್ಲಿ ಸಾವಿರಾರು ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ
ಬೆಂಗಳೂರು: ಜಪಾನ್ ಮತ್ತು ಸೌತ್ ಕೊರಿಯಾಗಳಲ್ಲಿ ಎರಡು ವಾರಗಳ ಕಾಲ ಪ್ರವಾಸ ಮಾಡಿದ್ದು, ಭವಿಷ್ಯದಲ್ಲಿ 25,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳು ಕಂಡುಬಂದಿವೆ ಎಂದು ಬೃಹತ್ ಮತ್ತು ಮಧ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು ನಿಯೋಗದ ಭೇಟಿಯಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾದ 6 ಪ್ರಮುಖ ಕಂಪನಿಗಳಿಂದ ಹೂಡಿಕೆ ಬದ್ಧತೆಯಾಗಿದೆ. ಕರ್ನಾಟಕದ ಆರ್ಥಿಕ ಪ್ರಗತಿ ಉತ್ತೇಜಿಸಲಿರುವ ಪ್ರಮುಖ ವಲಯಗಳಲ್ಲಿ ಗಮನಾರ್ಹ ಹೂಡಿಕೆಯಾಗಲಿದ್ದು, ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದ ವಿದೇಶಿ ಹೂಡಿಕ ಆಕರ್ಷಿಸುವ ಹಾಗೂ ಮುಂದಿನ ಫೆಬ್ರವರಿಯಲ್ಲಿ ಜರುಗಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (#GIM2025) ಯಶಸ್ವಿಗೊಳಿಸಲು, ಹೂಡಿಕೆದಾರರನ್ನು ಖುದ್ದಾಗಿ ಆಹ್ವಾನಿಸುವ ಗುರಿಯೊಂದಿಗೆ 24ನೇ ಜೂನ್ ನಿಂದ ಜುಲೈ 5ರವರೆಗೆ ಕೈಗೊಂಡಿದ್ದ ಪ್ರವಾಸ ಯಶಸ್ವಿಯಾಗಿದೆ.
ಉಭಯ ದೇಶಗಳ ಭೇಟಿಯ ಫಲಶ್ರುತಿಯಿಂದಾಗಿ ₹6,450 ಕೋಟಿ ಹೂಡಿಕೆಯ ಬದ್ಧತೆ 1,000ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಭವಿಷ್ಯದಲ್ಲಿ ₹25,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳು.
ಮುಖ್ಯಾಂಶಗಳು: 35 ಉದ್ಯಮಗಳ ಪ್ರಮುಖರ ಬೇಟಿ, 6 ಕಂಪನಿಗಳಿಂದ ಹೂಡಿಕೆ ಬದ್ಧತೆ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಪ್ರಮುಖ ಕಂಪನಿಗಳ ಜೊತೆಗೆ ಪಾಲುದಾರಿಕೆ, ಕರ್ನಾಟಕದ ಆರ್ಥಿಕ ಪ್ರಗತಿ ಉತ್ತೇಜಿಸಲಿರುವ ಪ್ರಮುಖ ವಲಯಗಳಲ್ಲಿನ ಗಮನಾರ್ಹ ಹೂಡಿಕೆಗಳಾಗಿವೆ ಎಂದಿದ್ದಾರೆ.