ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜ್ಯದ ಚುಕ್ಕಾಣಿ ಬದಲಾವಣೆ ಆದರೂ ಆಶ್ಚರ್ಯ ಇಲ್ಲ

05:41 PM Sep 04, 2024 IST | Samyukta Karnataka

ಹಾವೇರಿ: ರಾಜ್ಯದಲ್ಲಿ ರಾಜಕೀಯ ಒಂದು ಪರಿವರ್ತನೆ ಕಾಲ ನಡೆಯಲಿದೆ. ಎಲ್ಲ ಹಂತದಲ್ಲೂ ಬದಲಾವಣೆ ಆಗುತ್ತದೆ. ರಾಜ್ಯದ ಚುಕ್ಕಾಣಿ ಬದಲಾವಣೆ ಆದರೂ ಆಶ್ಚರ್ಯ ಏನು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ‌ ನಗರ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷರ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಹಾವೇರಿ ನಗರಸಭೆ ಬಿಜೆಪಿ ತೆಕ್ಕೆಗೆ ಬಂದಿದೆ
ನಗರವನ್ನು ಸಮಗ್ರ ಅಭಿವೃದ್ಧಿ ಮಾಡುತ್ತೇವೆ. ಹಾವೇರಿ ನಗರಸಭೆಯಲ್ಲಿ ಆದ ಬದಲಾವಣೆ ರಾಜ್ಯ ಸರ್ಕಾರದಲ್ಲೂ ಆಗುತ್ತಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಒಂದು ಪರಿವರ್ತನೆ ಕಾಲ ಕರ್ನಾಟಕದಲ್ಲಿ ನಡೆಯಲಿದೆ. ಎಲ್ಲ ಹಂತದಲ್ಲೂ ಬದಲಾವಣೆ ಆಗುತ್ತದೆ. ರಾಜ್ಯದ ಚುಕ್ಕಾಣಿ ಬದಲಾವಣೆ ಆದರೂ ಏನೂ ಆಶ್ಚರ್ಯ ಇಲ್ಲ ಎಂದರು.
ಬರುವ ‌ದಿನಗಳಲ್ಲಿ ರಾಜ್ಯದ ಚುಕ್ಕಾಣಿ ಬದಲಾವಣೆ ಆಗಲಿದೆ‌. ನಮ್ಮವರೇ ನಮಗೆ ಶತ್ರುಗಳು‌ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯನವರಿಗೆ ತಡವಾಗಿ ಗೊತ್ತಾಗುತ್ತಿದೆ. ನಾವು ಹಿಂದೆಯೇ ಹೇಳಿದ್ದೇವು. ಅವರಿಗೆ ತಡವಾಗಿ ಅನುಭವಕ್ಕೆ ಬಂದಿದೆ. ಎಲ್ಲವೂ ಸರಿ ಇದೆ ಅಂತಾ ದೋಣಿಯಲ್ಲಿ ಕುಳಿತ್ತಿದ್ದರು. ಈಗ ಕುಂತ ದೋಣಿಯಲ್ಲಿ ತೂತು ಕೊರೆಯುವ ಕೆಲಸ ನಡೆಯುತ್ತಿದೆ. ರಾಜಕೀಯ ಅನುಭವ ಬಳಸಿಕೊಂಡು ಯಾವ ರೀತಿ ಹೋರಾಟ ಮಾಡುತ್ತಾರೆ ಎಂದು ನೋಡೋಣ ಎಂದರು.

Next Article