ರಾಜ್ಯ ಸರ್ಕಾರದ ವಿರುದ್ಧ ಏಕಾಂಗಿ ಹೋರಾಟ
10:08 PM Feb 07, 2024 IST | Samyukta Karnataka
ಧಾರವಾಡ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಮುಖಂಡ ಪ್ರಮೋದ ಕಾರಕೂನ ಪ್ರತಿಭಟನೆ ನಡೆಸಿ ಮೂರು ಪ್ರಶ್ನೆಗಳಿಗೆ ಉತ್ತರ ಕೇಳುವ ಮೂಲಕ ಗಮನ ಸೆಳೆದಿದ್ದಾರೆ.
ಬುಧವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಹೋರಾಟ ಪ್ರಾರಂಭಿಸಿದ ಪ್ರಮೋದ, ಗ್ಯಾರಂಟಿ ಘೋಷಣೆ ನಂತರ ರಾಜ್ಯದ ಖಜಾನೆಯಲ್ಲಿ ಎಷ್ಟು ಪೈಸೆ ಉಳಿದಿದೆ…? ತೆರಿಗೆ ಹಣದಲ್ಲಿ ಗ್ಯಾರಂಟಿ ಕೊಟ್ಟು ಜನರನ್ನು ಹೆದರಿಸುವುದು ಏಕೆ… ಮತ್ತು ಕೇಂದ್ರ ಸರ್ಕಾರವನ್ನು ದೂರುವುದು ಎಷ್ಟು ಸರಿ…?, ಕಾಂಗ್ರೆಸ್ ನಾಯಕರಿಗೆ ಅಖಂಡ ಭಾರತದ ಬಗ್ಗೆ ದ್ವೇಷ ಏಕೆ ಹಾಗೂ ದೇಶವನ್ನು ಒಡೆಯುವ ಮಾತು ಹಾಗೂ ಕೃತಿ ಇವರಿಗೆ ಸಹಜವೇ…? ಎಂಬ ಮೂರು ಪ್ರಶ್ನೆಗಳುಳ್ಳ ಫಲಕವನ್ನು ಹಿಡಿದು ಪ್ರತಿಭಟನೆ ನಡೆಸಿದರು.