ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ: ದೇವಾಲಯಗಳಲ್ಲಿ ಸಂಭ್ರಮ

02:18 PM Jan 22, 2024 IST | Samyukta Karnataka

ಬಾಗಲಕೋಟೆ(ಇಳಕಲ್): ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯ ಸಡಗರಕ್ಕೆ ನಗರದ ಎಲ್ಲಾ ದೇವಾಲಯಗಳು ಸಂಪೂರ್ಣವಾಗಿ ಕೇಸರಿಮಯವಾಗಿವೆ. ಜತೆಗೆ ಕೇಸರಿ ಟೋಪಿ ಮತ್ತು ಕೇಸರಿ ಶಾಲು ಧರಿಸಿದ ಜನರ ಸಂಭ್ರಮ ದೇಗುಲಗಳಲ್ಲಿ ತುಂಬಿಕೊಂಡಿತ್ತು.
ನಗರದ ಎಲ್ಲಾ ಬೀದಿಗಳು ಕೇಸರಿಮಯವಾಗಿವೆ ದೇವಸ್ಥಾನಗಳಲ್ಲಿ ಸಂಭ್ರಮ ತುಂಬಿ ತುಳುಕತ್ತಲಿದೆ ವಿದ್ಯುದೀಪಗಳಿಂದ ಅಲಂಕಾರಗೊಂಡ ದೇವಾಲಯಗಳಲ್ಲಿ ಮಹಾಪೂಜೆ ಭಜನೆ ನಡೆದೆವು ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷವಾಗಿ ರಾಮಮಂದಿರ, ಜಗದೀಶ ಮಂದಿರ, ಲಕ್ಷ್ಮೀ ವೆಂಕಟೇಶ ದೇವಸ್ಥಾನ, ನಗರದಲ್ಲಿ ಇರುವ ಎಲ್ಲಾ ಹನುಮಾನ ದೇವಸ್ಥಾನಗಳಲ್ಲಿ ಅಲ್ಲದೇ ಅಂಬಾಭವಾನಿ ದೇವಸ್ಥಾನ, ಗುರುದತ್ತಾತ್ರೇಯ ದೇವಸ್ಥಾನ, ಲಕ್ಷ್ಮೀ ದೇವಸ್ಥಾನಗಳು ಹೀಗೆ ನೂರಾರು ದೇವಸ್ಥಾನಗಳು ಸಡಗರ ಸಂಭ್ರಮದಲ್ಲಿ ತುಂಬಿಕೊಂಡಿದ್ದವು.
ಅದರಲ್ಲೂ ನಗರದ ಪುರಾತನ ಶ್ರೀರಾಮ ದೇವಸ್ಥಾನದಲ್ಲಿ ಮಹಾಪೂಜೆಯನ್ನು ಮಾಡಿ ಪ್ರಸಾದ ವ್ಯವಸ್ಥೆಯನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಮಾರವಾಡಿ ಸಮಾಜದ ಬಾಂಧವರು ಮಾಡಿದ್ದು ವಿಶೇಷವಾಗಿತ್ತು. ಅದಕ್ಕೂ ಮೊದಲು ಮಹೇಶ್ವರಿ ಸಮಾಜದ ವತಿಯಿಂದ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾನದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಭಾಗವಹಿಸಿದ್ದರು.
ಶ್ರೀರಾಮಮಂದಿರದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ರಾಮಮಂದಿರವನ್ನು ತಲುಪಿತು. ಮೆರವಣಿಗೆಯಲ್ಲಿ ರಾಮನ ಘೋಷಣೆಗಳು ಮತ್ತು ಕೇಸರಿ ಧ್ವಜಗಳು ರಾರಾಜಿಸಿದವು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಭಾಗಿಯಾದರು.
ಬಸ್ ನಿಲ್ದಾಣ ರಸ್ತೆಯಲ್ಲಿ ಇರುವ ಆಂಜನೇಯನ ದೇವಸ್ಥಾನದಲ್ಲಿ ವಿಶ್ವಸ್ಥ ಮಂಡಳಿ ವತಿಯಿಂದ ಭಜನೆ ಸಂಗೀತ ಕಾರ್ಯಕ್ರಮಗಳು ನಡೆದು ಅಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಪ್ರಸಾದ ವ್ಯವಸ್ಥೆಯನ್ನು ಗುರುದಾಸ ನಾಗಲೋಟಿ ಮತ್ತು ತಂಡದವರು ಕೈಗೊಂಡಿದ್ದರು. ಒಟ್ಟಾರೆ ನಗರದಲ್ಲಿ ರಾಮಲಲ್ಲಾ ಸಂಭ್ರಮವನ್ನು ಭಕ್ತರು ಶ್ರದ್ಧಾಭಕ್ತಿಪೂರಕವಾಗಿ ಎಲ್ಲಾ ದೇವಸ್ಥಾನಗಳಲ್ಲಿ ಜಾತಿಬೇಧ ಮರೆತು ಮಾಡಿದ್ದು ಇಲ್ಲಿನ ಜನರ ಹೃದಯ ವೈಶ್ಯಾಲತೆಯನ್ನು ತೋರಿಸುತ್ತದೆ.
ವೀಣಾ ಕಾಶಪ್ಪನವರ ದರ್ಶನ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಾಗಲಕೋಟ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ನಗರದ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿ ದರ್ಶನ ಮಾಡಿದ್ದು ವಿಶೇಷವಾಗಿತ್ತು.

Next Article