ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಮೇಶ್ವರ ಕೆಫೆ ಬ್ಲಾಸ್ಟ್ ಭಯೋತ್ಪಾದಕರು ತೀರ್ಥಹಳ್ಳಿಯವರು ಎಂಬುದು ತಲೆ ತಗ್ಗಿಸುವ ವಿಚಾರ

03:46 PM Mar 27, 2024 IST | Samyukta Karnataka

ಚಿಕ್ಕಮಗಳೂರು: ಕುವೆಂಪುರಂತಹ ಮಹನೀಯರು ಹುಟ್ಟಿದ ಸುಸಂಸ್ಕೃತ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಭಯೋತ್ಪಾದಕರು ಇರುವುದು ತಲೆ ತಗ್ಗಿಸುವ ವಿಚಾರ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು

ಕಳೆದ ರಾತ್ರಿ ಎನ್‌ಐಎ ಬೆಂಗಳೂರು ರಾಮೇಶ್ವರ ಕೆಫೆ ಬ್ಲಾಸ್ಟ್ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದು ಇವರು ತೀರ್ಥಹಳ್ಳಿಯವರಾಗಿರುವುದು ಬೇಸರ ಹಾಗೂ ನೋವಿನ ಸಂಗತಿ ಎಂದು ಹೇಳಿದರು

ಬೆಂಗಳೂರು ರಾಮೇಶ್ವರಂ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿ ಸಂಶಯದಲ್ಲಿ ಇಬ್ಬರು ಆರೋಪಿಗಳನ್ನು ಎನ್‌ಐಎ ಕಳೆದ ರಾತ್ರಿ ವಶಕ್ಕೆ ಪಡೆದಿದ್ದು ಇವರು ತೀರ್ಥಹಳ್ಳಿಯವರು ಆಗಿರುವುದು ತಲೆತಗ್ಗಿಸುವ ವಿಚಾರ ಎಂದು ಹೇಳಿ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಭಯೋತ್ಪಾದಕರು ಇರುವುದು ಬೇಸರದ ನೋವಿನ ಸಂಗತಿ ಎಂದರು.

ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ ಗೆ ಸಹಾ ಸಾಮ್ಯತೆ ಇರುವುದು ಗೊತ್ತಾಗಿದೆ. ರಾಷ್ಟ್ರೀಯ ತನಿಖಾ ದಳ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಲಿದೆ ಎಂದು ಹೇಳಿದರು.

ಭಯೋತ್ಪಾದಕರಿಗೆ ಅಂತರ ರಾಷ್ಟ್ರೀಯ ಲಿಂಕ್ ಇರುವುದು ಗೊತ್ತಾಗಿದೆ. ಬೇರು ಸಹಿತ ಇದನ್ನು ಕಿತ್ತೊಗೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ. ರಾಜ್ಯ ಪೊಲೀಸರು ಸಹಾ ಎನ್‌ಐಎ ಗೆ ಈ ಕಾರ್ಯಾಚರಣೆಗೆ ಸಾಥ್ ನೀಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Next Article