For the best experience, open
https://m.samyuktakarnataka.in
on your mobile browser.

ರಾಷ್ಟ್ರದ ಐಕ್ಯತೆಯನ್ನೇ ಕಾಂಗ್ರೆಸ್ ಪ್ರಶ್ನಿಸಿದೆ

06:16 PM Feb 19, 2024 IST | Samyukta Karnataka
ರಾಷ್ಟ್ರದ ಐಕ್ಯತೆಯನ್ನೇ ಕಾಂಗ್ರೆಸ್ ಪ್ರಶ್ನಿಸಿದೆ

ದಾವಣಗೆರೆ: ರಾಷ್ಟ್ರಕವಿ ಕುವೆಂಪು ಅವರು ಐಕ್ಯತೆಗಾಗಿ ಬರೆದ ಸಾಲುಗಳನ್ನು ಬದಲಾಯಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನಮ್ಮ ದೇಶದ ಸಂಸ್ಕೃತಿಯನ್ನೇ ಪ್ರಶ್ನೆ ಮಾಡಿದೆ ಎಂದು 'ಜ್ಞಾನ ದೇಗುಲವಿದು ಧೈರ್ಯ ಮಾಡಿ ಪ್ರಶ್ನಿಸು' ಎಂಬ ಬದಲಾಯಿಸಿರುವ ಸಾಲುಗಳ ಕುರಿತು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಸಹನೆ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದದ ಅವರು ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಮೇಲೆ ಜ್ಞಾನ ದೇಗುಲವಿದು ಧೈರ್ಯದಿಂದ ಪ್ರಶ್ನೆಸು ಎನ್ನುವ ಸಾಲುಗಳನ್ನು ಬರೆಯುವ ಮೂಲಕ ಕುವೆಂಪು ಅವರು ಐಕ್ಯತೆಗಾಗಿ ಬರೆದಿದ್ದ 'ಜ್ಞಾನದೆಗುಲವಿದು ಕೈಮುಗಿದು ಒಳಗೆ ಬಾ' ಎನ್ನುವ ಸಾಲುಗಳನ್ನು ಬದಲಿಸಿ, ಕುವೆಂಪು ಅವರಿಗೆ ಅವಮಾನ ಮಾಡಿದೆ ಎಂದು ಕಿಡಿಕಾರಿದರು.

ಧೈರ್ಯವಾಗಿ ಪ್ರಶ್ನಿಸು ಎಂದು ಹೇಳಿದ್ದಾರೆ ಏನನ್ನು ಪ್ರಶ್ನಿಸಬೇಕು, ಕಾಂಗ್ರೆಸ್ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಪ್ರಶ್ನಿಸಬೇಕಾ?‌ಹಾಸ್ಟೆಲ್ ನಲ್ಲಿ ಸರಿಯಾಗಿ ಊಟ ಸಿಗುತ್ಯಿಲ್ಲ ಎಂದು ಪ್ರಶ್ನಿಸಬೇಕಾ? ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಸಿಗದೇ ಇರುವುದನ್ನು ಪ್ರಶ್ನಿಸಬೇಕಾಕಾ? ಏನನ್ನು ಪ್ರಶ್ನಿಸಬೇಕು ಎಂದು ಮರುಪ್ರಶ್ನೆ ಹಾಕಿದರು.

ಈ ಪ್ರಕರಣವನ್ನು ಕಾಂಗ್ರೆಸ್ ನ ಹಲವು ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ಸಚಿವ ಮಧು ಬಂಗಾರಪ್ಪ ಒದ್ದಾಡಿಕೊಂಡು ವಿರೋಧ‌ ಮಾಡಿದ್ದಾರೆ. ಮಧು ಬಂಗಾರಪ್ಪ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಗೊತ್ತಿಲ್ವಾ. ಗೊತ್ತಿಲ್ಲದೇ ಅಧಿಕಾರಿಗಳು ಮಾಡಿದರೆ ಕೂಡಲೆ ಸಚಿವರನ್ನು ಕ್ಯಾಬಿನೆಟ್ ನಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು‌.