ರಾಷ್ಟ್ರಪತಿ ಹುದ್ದೆಯಲ್ಲಿರುವ ದಲಿತ ಮಹಿಳೆಗೆ ಅಗೌರವ
ಕಲಬುರಗಿ: ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಹುದ್ದೆ ಹಾಗೂ ದ್ರೌಪದಿ ಮುರ್ಮು ದಲಿತ ಮಹಿಳೆ ಎನ್ನುವ ಕಾರಣಕ್ಕೆ ಅಗೌರವ ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂಥ ಮನಸ್ಥಿತಿ ಇದೆ ಎಂಬುದು ರಾಜ್ಯಕ್ಕೆ ಗೊತ್ತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಅನುಭವಿ ಮುಖ್ಯಮಂತ್ರಿಗಳು ಇಂತಹ ಹಿರಿಯರಿಂದ ರಾಜ್ಯದ ಸಿಎಂ ರಿಂದ ರಾಷ್ಟ್ರಪತಿ ಅಗೌರವ ಮಾತಾಡೋದು ಯಾರು ನೀರಿಕ್ಷೆ ಮಾಡಿರಲಿಲ್ಲ. ಮುಖ್ಯಮಂತ್ರಿ ಬಾಯಿಂದ ಈ ಪದ ಯಾಕೆ ಹೊರಬಂದಿತ್ತು ಎನ್ನುವುದು ಆಶ್ಚರ್ಯವಾಗಿದೆ. ರಾಷ್ಟ್ರಪತಿ ಸ್ಥಾನಕ್ಕೆ ಸಿದ್ದರಾಮಯ್ಯ ಅಗೌರವ ತೋರಿಸಿದ್ದಾರೆ ಅಕ್ಷಮ್ಯ ಅಪರಾಧವಾಗಿದೆ. ಮುಖ್ಯಮಂತ್ರಿ ಅಷ್ಟೇ ಅಲ್ಲ ಕಾಂಗ್ರೆಸ್‌ನ ಎಲ್ಲಾ ನಾಯಕರಿಗೆ ನೋವು ಕಾಡುತ್ತಿದೆ. ದಲಿತ ಮಹಿಳೆ ಅಷ್ಟು ದೊಡ್ಡ ಸ್ಥಾನದಲ್ಲಿ ಕೂಳಿತಿರುವುದು ಸಹಿಸಿಕೊಳ್ಳಲು ಆಗುತ್ತಿಲ್ಲ ದಲಿತರನ್ನು ತಾವೆ ಗುತ್ತಿಗೆ ತೆಗೆದುಕೊಂಡಿದ್ದಾರೆ ಎನ್ನುವ ಭಾವನೆ ಅವರದ್ದಾಗಿದೆ. ಹಿಂದುಳಿದ ವರ್ಗದ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುವವರು ಹಾಗೆ ಮಾತಾಡ್ತಾರೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಒಂಭತ್ತು ವರ್ಷದ ನಡುವಳಿಕೆ ಗಮನಿಸಿ ಎಲ್ಲರಿಗೂ ನ್ಯಾಯ ಒದಗಿಸಿದ್ದಾರೆ. ಹಿಂದುಳಿದ ವರ್ಗದ 27 ಕ್ಕೂ ಹೆಚ್ಚು ಜನರು ಅವರ ಕ್ಯಾಬಿನೆಟ್ ನಲ್ಲಿ ಸಚಿವರಿದ್ದು, ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಲಾಗಿದೆ .ಸಿಎಂ ಸಿದ್ದರಾಮಯ್ಯನವರಿಂದ ಬಾಯಿ ತಪ್ಪಿ ಬಂದಿದೆ ಎಂತ ಯಾರಿಗೂ ಅನ್ನಿಸುವುದಿಲ್ಲ. ಆದರೆ ಅವರ ಮನಸ್ಸಲ್ಲಿರುವ ಭಾವನೆ ವ್ಯಕ್ತಪಡಿಸಿದ್ದಾರೆ. ಇದು ಅವರ ಮನಸ್ಥಿತಿ ತಿಳಿಸಿ ಕೊಡುತ್ತದೆ ಎಂದು ಜರಿದರು.
ಕಾರ್ಪೊರೇಷನ್ ಕಸದ ವ್ಯಾನ್ ಸೇರಿದ ಬಿಜೆಪಿ ಬಾವುಟಗಳು : ಕಲಬುರಗಿ ನಗರದ ಹಲವಡೆ ರಸ್ತೆ ಬದಿ ಹಾಕಿದ್ದ ಬಿಜೆಪಿ ಬಾವುಟಗಳು ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿ ಕಸದ ವಾಹನಗಳ ಸೇರಿವೆ. ಸೋಮವಾರ ಸಂಜೆ ಎನ್ ವಿ ಮೈದಾನದಲ್ಲಿ ನಡೆಯುವ ಬಿಜೆಪಿ ಕಾರ್ಯಕ್ರಮ ಆರಂಭಕ್ಕೂ ಮುನ್ನವೆ ಕಸದ ವ್ಯಾನ್ ಸೇರಿವೆ. ಕಲಬುರಗಿಯಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಗ್ರಾಮೀಣ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಲಬುರಗಿಗೆ ಆಗಮನ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬ್ಯಾನರ್ ಕಟೌಟ್ ಹಾಕಲಾಗಿತ್ತು.