ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್‌ಶಿಪ್: ಮೊದಲ ದಿನವೇ ೫೦೦ ಕ್ರೀಡಾಪಟುಗಳ ಪೈಪೋಟಿ
08:49 AM Dec 07, 2024 IST | Samyukta Karnataka
ಬೆಂಗಳೂರು: ಡಿ.೬ರಿಂದ ಡಿ.೧೫ರವರೆಗೆ ನಡೆಯಲಿರುವ ೬೨ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ಗೆ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ೩೨ ರಾಜ್ಯಗಳ ೫೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ೨೮ ಅಧಿಕಾರಿಗಳು ಪೈಪೋಟಿ ನಡೆಸಿದರು. ಬೆಂಗಳೂರಿನ ಪವರ್ ಟ್ರ‍್ಯಾಕ್ ಸ್ಕೇಟಿಂಗ್ ರಿಂಕ್‌ನಲ್ಲಿ ಆರಂಭಗೊಂಡ ಈ ಚಾಂಪಿಯನ್‌ಶಿಪ್ ಅನ್ನು ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್(ಕೆಆರ್‌ಎಸ್‌ಎ) ನೇತೃತ್ವದಲ್ಲಿ ಇಂದೂಧರ್ ಸೀತಾರಾಮ್ ಮತ್ತು ಕ್ರಸಾ ತಂಡ ಮತ್ತು ಮಂಜುನಾಥ್ ಸ್ಥಳದ ಆತಿಥೇಯರು ಆಯೋಜಿಸಿದ್ದರು. ಚಾಂಪಿಯನ್‌ಶಿಪ್ ಆರಂಭಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಸಾಂಪ್ರದಾಯಿಕ ನೃತ್ಯಗಳಾದ ಡೊಳ್ಳು ಕುಣಿತ ಮತ್ತು ವೀರಗಾಸೆಯ ಆಕರ್ಷಕ ಪ್ರದರ್ಶನಗಳು ಎಲ್ಲರನ್ನೂ ಸೆಳೆದವು