For the best experience, open
https://m.samyuktakarnataka.in
on your mobile browser.

ರಾಸಾಯನಿಕ ಬಣ್ಣಕ್ಕೆ ಬೈ, ಮಣ್ಣಿಗೆ ಜೈ...

03:13 PM Mar 26, 2024 IST | Samyukta Karnataka
ರಾಸಾಯನಿಕ ಬಣ್ಣಕ್ಕೆ ಬೈ  ಮಣ್ಣಿಗೆ ಜೈ

ಹುಬ್ಬಳ್ಳಿ: ಹೋಳಿ ಹಬ್ಬ ಅಂದ್ರೆ ಬಣ್ಣಗಳ ಹಬ್ಬ. ಪ್ರತಿಯೊಬ್ಬರೂ ಬಣ್ಣಗಳ ಜೊತೆ ಆಡಲು ಇಷ್ಟಪಡುತ್ತಾರೆ. ಆದರೆ, ಇತ್ತೀಚಿಗೆ ಮಾರುಕಟ್ಟೆಯಲ್ಲಿ ದೊರೆಯುವು ಕೆಮಿಕಲ್ ಮಿಶ್ರಿತ ಬಣ್ಣಗಳಿಂದಾಗಿ ಹೆಚ್ಚಿನವರು ಬಣ್ಣಗಳಲ್ಲಿ ಆಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಆದರೆ, ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಯುವಕರು ವಿನೂತನವಾಗಿ ಬಣ್ಣದ ಹಬ್ಬವನ್ನು ಆಚರಿಸಿದ್ದಾರೆ.

ಬಣ್ಣದ ಬದಲು ಮಣ್ಣು ಎರಚಿಕೊಂಡು ಹೋಳಿ ಹಬ್ಬ ಆಚರಣೆ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ರಾಸಾಯನಿಕ ಬಣ್ಣಗಳಿಗೆ ಬೈ ಎಂದಿರುವ ನೂಲ್ವಿ ಗ್ರಾಮದ ಯುವಕರು, ಔಷಧಿಯ ಗುಣವುಳ್ಳ ಮಣ್ಣಿನಲ್ಲಿ ಮಿಂದೆದ್ದಿದ್ದಾರೆ. ಕಾಮದಹನದ ಬಳಿಕ ಸಮಾನ ಮನಸ್ಕರು ಸೇರಿಕೊಂಡು ತಮ್ಮ ಹೊಲದಲ್ಲಿನ ಮಣ್ಣನಿಂದ ಪರಸ್ಪರ ಎರಚಿಕೊಂಡು ಸಂಭ್ರಮಿಸಿದ್ದಾರೆ.

ರಾಸಾಯನಿಕವನ್ನು ಬಳಸಿ ತಯಾರಿಸಲಾದ ತರಹೇವಾರಿ ಬಣ್ಣಗಳು ಅಗ್ಗದ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಅವುಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇನ್ನು ಪರಿಸರ ಸ್ನೇಹಿ ಬಣ್ಣ ಬಹಳ ದುಬಾರಿ ಆದ್ದರಿಂದ ಸಾಮಾನ್ಯರು ಅವುಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಹೋಗಾಗಿ ಇದಕ್ಕೆ ಪರಿಹಾರ ಕೊಂಡುಕೊAಡ ನೂಲ್ವಿ ಗ್ರಾಮದ ಕೆಲ ಯುವಕರು ಬಣ್ಣದ ಬದಲು ಮಣ್ಣಿನ ಮೊರೆ ಹೋಗಿದ್ದಾರೆ.

ಆಯುರ್ವೇದದ ಪ್ರಕಾರ ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶ ಮಾನವನ ದೇಹವನ್ನು ರೂಪಿಸುವ ೫ ಮೂಲಭೂತ ಘಟಕಗಳು. ಭೂಮಿಯು ಜೀವಸತ್ವಗಳು, ಖನಿಜಗಳು ಮತ್ತು ಇತರ ಪದಾರ್ಥಗಳಲ್ಲಿ ಸಮೃದ್ಧವಾಗಿದೆ. ಅಂತೆಯೇ ಮಣ್ಣಿನ ಚಿಕಿತ್ಸೆಯು ಅದ್ಭುತ ಚಿಕಿತ್ಸೆಯಾಗಿದೆ. ಮಣ್ಣಿನ ಸ್ನಾನವು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ದೇಹದ ಮೇಲಿನ ಎಲ್ಲ ಕಲ್ಮಶಗಳನ್ನು ತೊಡೆದುಹಾಕಲು ಮತ್ತು ಚರ್ಮದ ನೈಸರ್ಗಿಕ ಹೊಳಪನ್ನು ಹೆಚ್ಚಿಸಲು ಮಣ್ಣು ಸ್ನಾನದ ಮೊರೆ ಹೋದ ನೂಲ್ಷಿ ಗ್ರಾಮದ ಯುವಕರು, ಹೋಳಿ ಆಚರಣೆಯ ಜೊತೆ ಜೊತೆಗೆ ಮಣ್ಣಿನ ಮಹತ್ವವನ್ನು ಸಾರಿದ್ದಾರೆ.