ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಹುಲ್ ಶರ್ಟ್‌ನಲ್ಲಿ ʻಐ ಲವ್ ವಯನಾಡ್ʼ

10:24 PM Nov 11, 2024 IST | Samyukta Karnataka

ವಯನಾಡ್: ಸಹೋದರಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಿರುವ ವಯನಾಡ್ ಕ್ಷೇತ್ರದ ಉಪಚುನಾವಣಾ ಪ್ರಚಾರ ವೇಳೆಯಲ್ಲಿ ರಾಹುಲ್‌ ಗಾಂಧಿ ಧರಿಸಿದ್ದ ಐ ಲವ್ ವಯನಾಡ್ ಎಂದು ಬರೆದ ಬಿಳಿ ಬಣ್ಣದ ಟಿ ಶರ್ಟ್ ಎಲ್ಲರ ಗಮನ ಸೆಳೆಯಿತು.
ಪ್ರಚಾರ ವೇಳೆಯಲ್ಲಿ ರಾಹುಲ್ ವೇದಿಕೆಗೆ ಬರುತ್ತಿದ್ದಂತೆಯೇ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾ, ಜನರ ಕಡೆ ಬೆನ್ನು ತೋರಿಸುವಂತೆ ರಾಹುಲ್‌ಗೆ ಸೂಚಿಸಿದರು. ಐ ಲವ್ ವಯನಾಡ್ ಎಂಬುದನ್ನು ನೋಡುತ್ತಿದ್ದಂತೆ ಜನರು ಸಹ ಖುಷಿಯಿಂದ ಸಂಭ್ರಮಿಸಿದರು. ಇದೇ ವೇಳೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ``ಹಲವು ವರ್ಷಗಳಿಂದ ನಾನು ರಾಜಕೀಯದಲ್ಲಿ 'ಪ್ರೀತಿ' ಎಂಬ ಪದವನ್ನು ಬಳಸಲಿಲ್ಲ ಎಂದು ವಿಮಾನದಲ್ಲಿ ಇಂದು ಪ್ರಯಾಣ ಮಾಡುವಾಗ ಅರಿತುಕೊಂಡೆ. ನಾನು ವಯನಾಡಿಗೆ ಬಂದ ನಂತರ ಇದ್ದಕ್ಕಿದ್ದಂತೆ ರಾಜಕೀಯದಲ್ಲಿ 'ಪ್ರೀತಿ' ಎಂಬ ಪದವನ್ನು ಬಳಸಲಾರಂಭಿಸಿದೆ. ವಯನಾಡಿನ ಜನರು ನನಗೆ ತುಂಬಾ ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಿದರು. ಇದರಿಂದ ನನ್ನ ಸಂಪೂರ್ಣ ರಾಜಕೀಯವೇ ಬದಲಾಯಿತು" ಎಂದರು.
ರಾಜಕೀಯದಲ್ಲಿ ಪ್ರೀತಿಗೆ ಮಹತ್ವದ ಸ್ಥಾನವಿದೆ. ವಯನಾಡ್‌ನ ಜನರು ನನಗೆ ಪ್ರೀತಿಯ ಮಹತ್ವವನ್ನು ಕಲಿಸಿದ್ದಾರೆ. ಅದಕ್ಕಾಗಿಯೇ 'ಐ ಲವ್ ವಯನಾಡ್' ಎಂಬ ಉಲ್ಲೇಖವಿರುವ ಶರ್ಟ್ ಧರಿಸಿದ್ದೇನೆ. ದ್ವೇಷ ಮತ್ತು ಕೋಪವನ್ನು ಎದುರಿಸುವ ಏಕೈಕ ಅಸ್ತ್ರವೆಂದರೆ ಪ್ರೀತಿ ಮತ್ತು ವಾತ್ಸಲ್ಯ ನಾನು ಇಲ್ಲಿಗೆ ಬಂದಾಗಲೆಲ್ಲಾ ಸಹಜವಾಗಿ ಸಂತೋಷಪಡುತ್ತೇನೆ ಎಂದರು.
“ಪ್ರಿಯಾಂಕಾ ಗಾಂಧಿ ಇಲ್ಲಿ ಅಭ್ಯರ್ಥಿ.. ನನ್ನ ಸಹೋದರಿಯೂ ಹೌದು. ವಿಶ್ವದಲ್ಲಿಯೇ ವಯನಾಡ್ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲು ಸಹೋದರಿ ಪ್ರಯತ್ನ ಮಾಡುತ್ತಾರೆ. ಅಂತಹ ಕ್ರಮವು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರದೇಶದ ಸೌಂದರ್ಯವನ್ನು ಜಗತ್ತಿಗೆ ಪ್ರದರ್ಶಿಸುತ್ತದೆ. ಜನರು ಕೇರಳ ರಾಜ್ಯಕ್ಕೆ ಭೇಟಿ ನೀಡಬೇಕೆಂದು ಯೋಚಿಸಿದಾಗ, ಮೊದಲ ತಾಣ ವಯನಾಡ್ ಆಗಿರಬೇಕು ಎಂದರು.

Tags :
#RahulGandhicongresselectionPriyanka GandhiWayanad
Next Article