ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರೀಲ್ಸ್‌ಗಾಗಿ ಪ್ರಾಣ ಕಳೆದುಕೊಂಡ ಯುವತಿ

01:04 PM Jun 18, 2024 IST | Samyukta Karnataka

ಕಾರು ಚಲಾಯಿಸುತ್ತಿರುವದನ್ನು ರೀಲ್ಸ್​ ಮಾಡಲು ಹೋಗಿ, ಓರ್ವ ಯುವತಿ ಕಾರಿನೊಂದಿಗೆ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾರು ಚಲಾಯಿಸುತ್ತಿದ್ದ ಯುವತಿ ರಿವರ್ಸ್​ ಗೇರ್​ನಲ್ಲಿದ್ದಾಗ ಏಕಾಏಕಿ ಎಕ್ಸಲೇಟರ್​​ ಒತ್ತಿದ ಪರಿಣಾಮ ಕಾರು ಕಂದಕಕ್ಕೆ ಬಿದ್ದು ಆಕೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಶ್ವೇತಾ (25) ಮೃತ ದುರ್ದೈವಿ. ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದಲ್ಲಿ ಯುವತಿ ಆಕಸ್ಮಿಕವಾಗಿ ರಿವರ್ಸ್​ ಗೇರ್​ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರು ಹಿಂಬದಿಯ ಕ್ರ್ಯಾಶ್​ ಬ್ಯಾರಿಯರ್​ ಅನ್ನು ಮುರಿದು ಕಂದಕಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾಳೆ. ಶ್ವೇತಾಗೆ ಕಾರು ಓಡಿಸುವಾಗ ರೀಲ್‌ಗಳನ್ನು ತಯಾರಿಸುವ ಆಸೆ ಇತ್ತು. ಮೊಬೈಲನ್ನು ಶಿವರಾಜ್ ಗೆ ಕೊಟ್ಟು ತನ್ನ ರೀಲ್ಸ್​ ಮಾಡುವಂತೆ ಕೇಳಿದ್ದಳು. ಈ ವೇಳೆ ಬೆಟ್ಟದ ತುದಿಯಲ್ಲಿ ಕಾರು ನಿಲ್ಲಿಸಿ ರೀಲ್ಸ್ ಮಾಡುತ್ತಿದ್ದಳು. ಕಾರಿನೊಳಗೆ ಕುಳಿತ ಶ್ವೇತಾ ರಿವರ್ಸ್ ಗೇರ್‌ನಲ್ಲಿದ್ದ ಕಾರನ್ನು ಚಲಾಯಿಸಿದ್ದಾಳೆ.ಏಕಾಏಕಿ ಜೋರಾಗಿ ಎಕ್ಸಿಲೇಟರ್‌ ಹೊತ್ತಿದ್ದಾಳೆ. ಅಷ್ಟೇ ನೋಡ ನೋಡುತ್ತಿದ್ದಂತೆ ಜಸ್ಟ್‌ 15 ಸೆಕೆಂಡ್‌ನಲ್ಲೇ ಯುವತಿ ಕಾರು ಸಮೇತ ಪ್ರಪಾತಕ್ಕೆ ಬಿದ್ದಿದ್ದಾಳೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Next Article