For the best experience, open
https://m.samyuktakarnataka.in
on your mobile browser.

ರೇವಣ್ಣ ಈ ರೀತಿ ಹೇಳಿಕೆ ಯಾಕೆ ನೀಡಿದ್ದಾರೋ ಗೊತ್ತಿಲ್ಲ…

12:51 PM Nov 28, 2024 IST | Samyukta Karnataka
ರೇವಣ್ಣ ಈ ರೀತಿ ಹೇಳಿಕೆ ಯಾಕೆ ನೀಡಿದ್ದಾರೋ ಗೊತ್ತಿಲ್ಲ…

ಕುಮಾರಸ್ವಾಮಿ ಇಲ್ಲದಿದ್ದರೆ ಜಿ.ಟಿ.ದೇವೇಗೌಡರು ಮಗನ ಜೊತೆ ಜೈಲಿನಲ್ಲಿರಬೇಕಿತ್ತು ಎಂಬ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಶಾಸಕ ಜಿ.ಟಿ.ದೇವೇಗೌಡ ತಿರುಗೇಟು ನೀಡಿದ್ದಾರೆ.

ಮೈಸೂರು: ನನ್ನ ಮೇಲೆ ಯಾರು ರಾಜಕೀಯವಾಗಿ ದೂರು ಕೊಟ್ಟಿಲ್ಲ. ನನ್ ಮೇಲೆ ಯಾವ್ ಕೇಸ್ ಇದೆ ತೋರಿಸಲಿ ಎಂದು ಜಿ ಟಿ ದೇವೇಗೌಡರು ಹೇಳಿದ್ದಾರೆ.
ಅಂದಿನ ಕಾಂಗ್ರೆಸ್ ಸರ್ಕಾರ ಜಿಟಿ ದೇವೇಗೌಡರನ್ನ ಬಂಧಿಸಲು ಸಿದ್ದತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಇಲ್ಲದಿದ್ದರೇ ಜಿಟಿ ದೇವೇಗೌಡರು ಮಗನ ಜೊತೆ ಜೈಲಿನಲ್ಲಿರಬೇಕಿತ್ತು ಎಂದು ಹೇಳಿಕೆ ನೀಡಿದ್ದ ಶಾಸಕ ಹೆಚ್ ಡಿ ರೇವಣ್ಣ ಅವರಿಗೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ತಿರುಗೇಟು ನೀಡಿದ್ದಾರೆ. ಮೈಸೂರಿನ ವಿವಿ ಪುರಂ ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೇವಣ್ಣ ಈ ರೀತಿ ಹೇಳಿಕೆ ಯಾಕೆ ನೀಡಿದ್ದಾರೋ ಗೊತ್ತಿಲ್ಲ. ನನ್ನನ್ನು ಅರೆಸ್ಟ್ ಮಾಡ್ತಾರೆ ಬಿಡಿಸಿಕೊಡಿ ಎಂದು ಯಾರ ಬಳಿಯೂ ಕೂಡ ಕೇಳಿಲ್ಲ. ರೇವಣ್ಣನವರೇ ದಯವಿಟ್ಟು ಕ್ಷಮಿಸಿ, ನನ್ನನ್ನು ಯಾರೂ ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ರೇವಣ್ಣರನ್ನೇ ಕೇಳುತ್ತೇನೆ ನಾನು ಸಾಧ್ಯವಾದಷ್ಟು ಮಾಧ್ಯಮಗಳಿಂದ ದೂರ ಇದ್ದೀನಿ. ಏನು ಮಾತನಾಡಬಾರದು ಎಂದು ನನ್ನ ಮನಸ್ಸಿನಲ್ಲಿ ತೀರ್ಮಾನ ಮಾಡಿದ್ದೀನಿ. ಆದರೆ ಯಾಕೆ ನನ್ನ ಹೆಸರನ್ನ ಪದೇ ಪದೇ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರ ಸಮಸ್ಯೆ ಆಲಿಸೋದು. ಅಭಿವೃದ್ಧಿ ಮಾಡೋದು ಬಿಟ್ಟು ಬೇರೆ ಯಾವುದು ಆಲೋಚನೆ ನನಗೆ ಇಲ್ಲ, ನನ್ನ ಮೇಲೆ ಯಾರೂ ಕೂಡ ರಾಜಕೀಯವಾಗಿ ದೂರು ಕೊಟ್ಟಿಲ್ಲ. ನನ್ನ ಮೇಲೆ ಯಾವ ಕೇಸ್ ಇದೆ ತೋರಿಸಲಿ. ಸುಳ್ಳು ಕೇಸ್ ಹಾಕಿಸುವ ಕೆಲಸವನ್ನು ಸಿದ್ಧರಾಮಯ್ಯ ಮಾಡಿಲ್ಲ ಎಂದರು.