For the best experience, open
https://m.samyuktakarnataka.in
on your mobile browser.

ರೈತರಿಗೆ ನ್ಯಾಯ ಸಿಗಲಿದೆ

10:26 AM Nov 07, 2024 IST | Samyukta Karnataka
ರೈತರಿಗೆ ನ್ಯಾಯ ಸಿಗಲಿದೆ

ಯತ್ನಾಳ ಅವರ ಹೋರಾಟದಿಂದ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಸಿಗಲಿದೆ

ಹುಬ್ಬಳ್ಳಿ: ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರ್ಕಾರ ವಕ್ಫ್ ಬೋಡ್೯ ಆಸ್ತಿ ಕಬಳಿಕೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹರಿಹಾಯ್ದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಅನ್ಯಾಯವಾಗುತ್ತಿರುವ ಖಂಡಿಸಿ ಬಿಜೆಪಿ ಹಿರಿಯ ನಾಯಕ ಬಸವನಗೌಡ ಪಾಟೀಲ ಯತ್ನಾಳ ಅವರ ಹೋರಾಟ ಫಲವಾಗಿ ಕೇಂದ್ರ ವಕ್ಫ್ ಬೋಡ್೯ ತಿದ್ದುಪಡಿ ಮಸೂದೆಯ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ ಬರುತ್ತಿದ್ದು, ಜನರ ಅಹವಾಲು ಸ್ವೀಕರಿಸುತ್ತಿದ್ದಾರೆ. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

ಯತ್ನಾಳ ಅವರ ಹೋರಾಟದಿಂದ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು.

ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ತರುವುದು ಕೇಂದ್ರ ಸರ್ಕಾರ ಮುಂದೆ ಇದೆ. ಸಮಿತಿ ಈ ಕಾರ್ಯ ಮಾಡಲಿದೆ. ವಕ್ಫ್ ಮುಖಾಂತರ ರಾಜ್ಯ ಸರ್ಕಾರ ಜನರಿಗೆ ಯಾವ ರೀತಿ ಮೋಸ ಮಾಡುತ್ತಿದ್ದಾರೆ. ಅದನ್ನು ಸರಿ ಪಡಿಸುವ ಒಂದು ಅವಕಾಶವಿದೆ. ಮುಂದೆ‌ ವಕ್ಫ್ ತಿದ್ದುಪಡೆ ಕಾಯ್ದೆ ಬಂದಾಗ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ದೊರೆಕಿಸಿಕೊಡಲು ಅವಕಾಶವಿದೆ ಎಂದು ಹೇಳಿದರು.

Tags :