ರೈತರಿಗೆ ಸಿಬಿಲ್ ಸ್ಕೋರ್‌ನ ಅಗತ್ಯವಿಲ್ಲದೆ ಮರುಸಾಲ
ಬೆಂಗಳೂರು: ರೈತ ಸಾಲಕ್ಕೆ ಸಂಬಂಧಿಸಿದಂತೆ 10 ಲಕ್ಷದವರೆಗೂ ಸಿಬಿಲ್ ಸ್ಕೋರ್ ಅಗತ್ಯವಿಲ್ಲದೆ, ಮರುಸಾಲ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಧಾರವಾಡದ ಡಿಸಿ ಕಚೇರಿಯಲ್ಲಿ ಬ್ಯಾಂಕ್ ಆಫ್ ಬರೋಡಾ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಏರುತ್ತಿರುವ ಬೆಲೆಗಳು, ಹಾಗೂ ಹವಾಮಾನ ಬದಲಾವಣೆಯಿಂದಾಗಿ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಹಾಗಾಗಿ ರೈತ ಸಾಲಕ್ಕೆ ಸಂಬಂಧಿಸಿದಂತೆ 10 ಲಕ್ಷದ ವರೆಗೂ ಯಾವುದೇ ತೊಂದರೆಯಿಲ್ಲದೆ ಸಿಬಿಲ್ ಸ್ಕೋರ್ ಅಗತ್ಯವಿಲ್ಲದೆ, ಮರುಸಾಲ ನೀಡಬೇಕು, ಇದರಿಂದಾಗಿ ಜಿಲ್ಲೆಯ ರೈತವರ್ಗಕ್ಕೆ ಉಪಯೋಗವಾಗುತ್ತದೆ ಎಂದು ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳ ಅಧಿಕಾರಿಗಳಿಗೆ ಸೂಚಿಸಿದೆನು. ಈ ಕೂಡಲೇ ಈ ಸೂಚನೆಯನ್ನು ಎಲ್ಲಾ ಬ್ಯಾಂಕ್‌ಗಳಿಗೆ ಲಿಖಿತ ರೂಪದಲ್ಲಿ ನೀಡುವುದಾಗಿ ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ರೈತರೆಲ್ಲರೂ ಸಿಬಿಲ್ ಸ್ಕೋರ್‌ನ ಅಗತ್ಯವಿಲ್ಲದೆ ಮರುಸಾಲ ಪಡೆಯಲು ಸುಲಭವಾಗುತ್ತದೆ. ಈ ಸಭೆಯಲ್ಲಿ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯ ಪ್ರಭು, ಬ್ಯಾಂಕ್‌ನ ನಿರ್ವಹಣಾಧಿಕಾರಿ ಪ್ರಭು ದೇವ್ ಹಾಗೂ ವಿವಿಧ ಬ್ಯಾಂಕ್ ಅಧಿಕಾರಿ ವರ್ಗದವರು ಮತ್ತು ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು ಎಂದಿದ್ದಾರೆ.